ಸಮಗ್ರ ನ್ಯೂಸ್: ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ(67) ವಿಧಿವಶರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮನೆಯಲ್ಲಿ ಬೆಳಗ್ಗೆ 6.45ಕ್ಕೆ ಹೃದಯಾಘಾತದಿಂದ ಕುಸಿದುಬಿದ್ದು ಜಿ.ವಿ.ಶ್ರೀರಾಮರೆಡ್ಡಿ ನಿಧನರಾಗಿದ್ದಾರೆ. ತಕ್ಷಣವೇ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಿಪಿಐಎಂ ಪಕ್ಷದಿಂದ ಎರಡು ಭಾರಿ ಶಾಸಕರಾಗಿದ್ದ ಶ್ರೀರಾಮರೆಡ್ಡಿ ಪ್ರಗತಿಪರ ಶಾಸಕರೆಂದೇ ಖ್ಯಾತಿಯಾಗಿದ್ದರು.
ಇತ್ತೀಚೆಗೆ CPIM ಪಕ್ಷ ತೊರೆದು ತಮ್ಮದೆ ಪ್ರಜಾ ಸಂಘರ್ಷ ಸಮಿತಿ ಸ್ಥಾಪನೆ ಮಾಡಿ, ಸಾಮಾಜಿಕ ಹೋರಾಟ ಆರಂಭಿಸಿದ್ದರು.
ಸಮಾಜದ ಸುಧಾರಣೆಗಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದ ಜಿ.ವಿ.ಎಸ್ ನಿಧನದಿಂದ ಅಪಾರ ಬೆಂಬಲಿಗರಲ್ಲಿ ದುಃಖ ಮಡುಗಟ್ಟಿದೆ.