Ad Widget .

ಈಶ್ವರಪ್ಪ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಸಂತೋಷ್ ಆತ್ಮಹತ್ಯೆ| ಕೇಸ್ ದಾಖಲಿಸಿದ ಕುಟುಂಬ| ರಾಜೀನಾಮೆ ಕೊಡ್ತಾರಾ ಈಶ್ವರಪ್ಪ?

ಸಮಗ್ರ ನ್ಯೂಸ್: ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವುದು ಸಚಿವ ಈಶ್ವರಪ್ಪ ಅವರಿಗೆ ಸಂಕಷ್ಟ ತಂದೊಡ್ಡಿದ್ದು, ಅವರ ತಲೆದಂಡ ಆಗುವುದು ಖಚಿತ ಎನ್ನಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಜ್ಯದಲ್ಲಿ 2-3 ತಿಂಗಳಿಂದ ಒಂದೊಂದೆ ವಿವಾದ ಹುಟ್ಟುತ್ತಿದ್ದು, ಬಿಜೆಪಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಗುತ್ತಿಗೆದಾರರಿಂದ ಶೇ. 40 ಕಮಿಷನ್ ಆರೋಪ, ರಾಷ್ಟ್ರಧ್ವಜ ಕುರಿತು ಈಶ್ವರಪ್ಪನವರ ವಿವಾದಾತ್ಮಕ ಹೇಳಿಕೆ, ಹರ್ಷ ಕೊಲೆ ಪ್ರಕರಣ, ಹಿಜಾಬ್, ಹಲಾಲ್, ವ್ಯಾಪಾರ ಧರ್ಮ ಹೀಗೆ ಒಂದಲ್ಲಾ ಒಂದು ವಿವಾದದಿಂದ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಸರ್ಕಾರಕ್ಕೆ ಹೊಸ ವಿವಾದ ತಲೆನೋವಾಗಿದೆ.

Ad Widget . Ad Widget . Ad Widget .

ಈ ಹಿಂದೆ ಗಣಪತಿ ಎಂಬ ಪೋಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ತನ್ನ ಆತ್ಮಹತ್ಯೆಗೆ ಅವರೇ ಕಾರಣ ಎಂದು ಡೆತ್‌ನೋಟ್ ಬರೆದಿದ್ದರು. ಅಂದು ಪ್ರತಿಪಕ್ಷದ ಸ್ಥಾನದಲ್ಲಿ ಕೂತಿದ್ದ ಬಿಜೆಪಿ, ಜಾರ್ಜ್ ತಲೆದಂಡವಾಗಲೇಬೇಕೆಂದು ಪಟ್ಟು ಹಿಡಿದಿದ್ದರು. ವಿಧಿಯಿಲ್ಲದೆ ಅಂದು ಅವರು ರಾಜೀನಾಮೆ ನೀಡಬೇಕಾಯಿತು. ಈಗ ಇದೇ ಅಸ್ತ್ರವನ್ನು ಕಾಂಗ್ರೆಸ್ ಬಿಜೆಪಿ ವಿರುದ್ಧ ತಿರುಗಿಸಲು ಮುಂದಾಗಿದೆ.

ಈ ನಡುವೆ ಈಶ್ವರಪ್ಪ ವಿರುದ್ದ ಸಂತೋಷ್ ಕುಟುಂಬ ದೂರು ದಾಖಲಿಸಿದ್ದು, ಸಚಿವರು ರಾಜಿನಾಮೆ ಕೊಡುವವರೆಗೆ ಹೆಣ ಎತ್ತಲ್ಲ ಎಂದು ಸಂತೋಷ್ ಸಹೋದರ ಹೇಳಿದ್ದಾರೆ.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬಗ್ಗೆ ಅವರ ಪತ್ನಿ ಜಯಶ್ರೀ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಮೂರು ವರ್ಷಗಳ ಹಿಂದಷ್ಟೇ ತಾವು ಸಂತೋಷ್ ಅವರನ್ನು ವಿವಾಹವಾಗಿದ್ದು ತಮಗೆ ಎರಡು ವರ್ಷದ ಮಗು ಇದೆ ಎಂದು ಅವರು ತಿಳಿಸಿದ್ದಾರೆ. ತಮ್ಮ ಪತಿಯ ಆತ್ಮಹತ್ಯೆಗೆ ಈಶ್ವರಪ್ಪನವರೇ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಹಣ ಮಂಜೂರು ಮಾಡಲು ಸಚಿವ ಈಶ್ವರಪ್ಪನವರು 40 ಪರ್ಸೆಂಟ್ ಲಂಚದ ಬೇಡಿಕೆ ಇಟ್ಟಿದ್ದರು. ತಮ್ಮ ಪತಿ ಹಣ ಮಂಜೂರು ಮಾಡಿಸಿಕೊಳ್ಳಲು 6 ದಿನಗಳವರೆಗೂ ಶಿವಮೊಗ್ಗದಲ್ಲಿ ತಂಗಿದ್ದರು. ಆದರೂ ಸಹ ಹಣ ಬರಲಿಲ್ಲ ಎಂದಿದ್ದಾರೆ.

Leave a Comment

Your email address will not be published. Required fields are marked *