ಸಮಗ್ರ ನ್ಯೂಸ್ : ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಎಂಟು ಮಂದಿ ಪೊಲೀಸರು ಮತ್ತು ಉಡುಪಿ ಜಿಲ್ಲೆಯ ಇಬ್ಬರು ಪೊಲೀಸರಿಗೆ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಟರಾಜ್ (ಎಸಿಪಿ, ಸಂಚಾರ), ಪ್ರದೀಪ್ ಟಿ.ಆರ್ (ಪಿಎಸ್‌ಐ, ಸಿಸಿಬಿ), ಶೋಭಾ (ಪಿಎಸ್‌ಐ, ಬರ್ಕೆ ಠಾಣೆ), ವನಜಾಕ್ಷಿ (ಸಿಸಿಆರ್‌ಬಿ, ಪಿಎಸ್‌ಐ), ಕುಶಾಲ್ ಮಣಿಯಾಣಿ (ಎಎಸ್‌ಐ ಬಜಪೆ ಠಾಣೆ), ಇಸಾಕ್ ಕೆ (ಸಿಎಚ್‌ಸಿ ಪಣಂಬೂರು ಠಾಣೆ) ಹಾಗೂ ಎಸಿಬಿ ಹೆಡ್ ಕಾನ್ ಸ್ಟೆಬಲ್ ಹರಿಪ್ರಸಾದ್, ಗೃಹ ರಕ್ಷಕ ದಳದ ದ.ಕ ಜಿಲ್ಲಾ ಪ್ಲಟೂನ್ ಕಮಾಂಡರ್ ಆರ್ಕ್ ಸೆರಾ ಆಯ್ಕೆಯಾಗಿದ್ದಾರೆ. ಹಾಗೂ ಉಡುಪಿ ಜಿಲ್ಲೆಯ ಪೋಲಿಸ್ ಇಲಾಖೆಯಲ್ಲಿ ಡಿವೈಎಸ್ಪಿ ಡಿ ಎ ಆರ್ ಆಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಆರ್ ನಾಯಕ್ ಮತ್ತು ಅಪರಾಧ ಪತ್ತೆ ವಿಭಾಗದಲ್ಲಿ ಹಿರಿಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಜಯ್ ಕುಮಾರ್ ಮುಖ್ಯ ಮಂತ್ರಿ ಪದಕ ಪುರಸ್ಕಾರ ಕ್ಕೆ ಆಯ್ಕೆಯಾಗಿದ್ದಾರೆ.
ಇನ್ನು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವ ಪೊಲೀಸರಿಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ಅಭಿನಂದನೆ ಸಲ್ಲಿಸಿದ್ದಾರೆ.
2021 ರ ಮುಖ್ಯ ಮಂತ್ರಿ ಪದಕ ಪುರಸ್ಕಾರ ಪ್ರದಾನ ಸಮಾರಂಭವು ಎಪ್ರಿಲ್ 2ರಂದು, ಬೆಳಗ್ಗೆ8 ಗಂಟೆಗೆ ಬೆಂಗಳೂರಿನ ಮೂರನೇ ಪಡೆ ಕೆಎಸ್ ಆರ್ ಪಿ ಕೋರಮಂಗಲದಲ್ಲಿ ನಡೆಯಲಿದೆ.