Ad Widget .

ಹರ್ಷ ಕೊಲೆ ಪ್ರಕರಣ| ಎನ್ಐಎ ಯಿಂದ ತನಿಖೆ ಆರಂಭ

Ad Widget . Ad Widget .

ಸಮಗ್ರ ನ್ಯೂಸ್: ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಎನ್​ಐಎ ತನಿಖೆ ನೀಡಲಾಗಿತ್ತು. ಇದೀಗ ಎನ್​ಐಎ ತಂಡ ತನ್ನ ತನಿಖೆ ಆರಂಭಿಸಿದೆ. ಫೆಬ್ರವರಿ 20 ರಂದು ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾಗಿತ್ತು.

Ad Widget . Ad Widget .

ನಗರದ ಎನ್​ಐಎ ಅಧಿಕಾರಿಗಳು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ತಮ್ಮ ಕಚೇರಿಯಲ್ಲಿ ಕಾರ್ಯ ಆರಂಭಿಸಿದ್ದಾರೆ. ದೊಮ್ಮಲೂರಲ್ಲಿ ಎನ್​ಐಎ ಪ್ರಾದೇಶಿಕ ಕಚೇರಿ ಕಾರ್ಯಾರಂಭವಾಗಿದೆ. ಇದಕ್ಕಾಗಿ ಓರ್ವ ಡಿಐಜಿ, ಒಬ್ಬರು ಎಸ್​ಪಿ, ಇನ್ಸ್​ಪೆಕ್ಟರ್​, ಪಿಎಸ್‌ಐ, ಎಎಸ್‌ಐ, ಹೆಚ್​ಸಿಸಿ, ಪಿಸಿ ಸೇರಿದಂತೆ 20 ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ಸದ್ಯ ದೆಹಲಿಯಲ್ಲಿ ದಾಖಲಾಗಿದ್ದ ಹರ್ಷ ಕೊಲೆ ಪ್ರಕರಣದ ಕೇಸ್ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಹರ್ಷ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನ ಎನ್‌ಐಎ ಸದ್ಯ ವಶಕ್ಕೆ ಪಡೆದಿದೆ. ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಮೂವರು ಆರೋಪಿಗಳು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ. ಬಾಡಿ ವಾರಂಟ್ ಮೂಲಕ 3 ಆರೋಪಿಗಳು ಎನ್​ಐಎ ವಶಕ್ಕೆ ಪಡೆದು ಗ್ರಿಲ್ ಮಾಡಲಾಗಿದೆ. ಉಳಿದ 7 ಆರೋಪಿಗಳ ಪೈಕಿ ಮೂವರು ಬಳ್ಳಾರಿ ಮತ್ತು ಉಳಿದ ನಾಲ್ವರು ಮೈಸೂರಿನ ಜೈಲಿನಲ್ಲಿದ್ದಾರೆ. ಉಳಿದ 7 ಆರೋಪಿಗಳನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಎನ್​ಐಎ ಪಡೆದುಕೊಳ್ಳಲಿದೆ.

Leave a Comment

Your email address will not be published. Required fields are marked *