Ad Widget .

25 ವರ್ಷದವಳನ್ನು ಮದ್ವೆಯಾಗಿ ವೈರಲ್ ಆಗಿದ್ದ 45 ವರ್ಷದ ಶಂಕರಣ್ಣ ನೇಣು ಬಿಗಿದು ಆತ್ಮಹತ್ಯೆ!ಕಾರಣ?…

Ad Widget . Ad Widget .

ಸಮಗ್ರ ನ್ಯೂಸ್: 45 ವರ್ಷದ ವ್ಯಕ್ತಿ ಜೊತೆಗೆ 25ರ ಯುವತಿ ಮದುವೆಯಾಗಿದ್ದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೀಗ ಈ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ.

Ad Widget . Ad Widget .

ಶಂಕರಣ್ಣ(45) ಮೃತ ದುರ್ದೈವಿಯಾಗಿದ್ದು, ಕಳೆದ ವರ್ಷ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಮತ್ತು ಮೇಘನಾ ಅವರ ಮದುವೆ ನಡೆದಿತ್ತು. ಆದರೆ ಮದುವೆಯಾದ ಐದು ತಿಂಗಳಿನಲ್ಲಿಯೇ ಶಂಕರಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂರ್ನಾಲ್ಕು ದಿನದಿಂದ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಕೋಪ ಮಾಡಿಕೊಂಡು ಸೋಮವಾರ ಮನೆ ಬಿಟ್ಟು ಹೋಗಿದ್ದ ಶಂಕರಣ್ಣನವರು, ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದಲ್ಲಿದ್ದ ತಮ್ಮ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

2021ರಲ್ಲಿ ಮದುವೆಯಾಗಿದ್ದ ಈ ದಂಪತಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದ ಮೇಘನಾಗೆ ಈ ಮುನ್ನ ಬೇರೆಯವರೊಂದಿಗೆ ಮದುವೆಯಾಗಿತಂತೆ. ಆದರೆ ಪತಿ ಎರಡು ವರ್ಷಗಳಿಂದ ಕಾಣೆಯಾಗಿದ್ದರಿಂದ ಮೇಘನಾಳೇ ಹೋಗಿ ಶಂಕರಣ್ಣ ಅವರನ್ನು ಮದುವೆಯಾಗಿದ್ದಾಳಂತೆ. ಸ್ವತಃ ಮೇಘನಾ ಶಂಕರಣ್ಣ ಬಳಿ ಹೋಗಿ ಮದುವೆಯಾಗಿ ಅಂತಾ ಕೇಳಿಕೊಂಡಿದ್ದಳು. ಆದರೆ ಮೊದಲಿಗೆ ಮದುವೆಯಾಗಲು ಒಪ್ಪದ ಶಂಕರಣ್ಣ ಕೊನೆಗೆ ಒಪ್ಪಿಕೊಂಡು ಮೇಘನಾಳನ್ನು ಸಮೀಪದ ದೇವಾಲಯದಲ್ಲಿ ಮದುವೆಯಾಗಿದ್ದರು.

Leave a Comment

Your email address will not be published. Required fields are marked *