ಸಮಗ್ರ ನ್ಯೂಸ್: ಕಂಗನಾ ರಣಾವತ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಸಾಕಷ್ಟು ಸದ್ದು ಮಾಡುತ್ತಿರುವ ಜೊತೆಗೆ ಆ ಶೋ ಸ್ಪರ್ಧಿಯಿಂದಲೋ ಅಥವಾ ಮತ್ತೊಂದು ಸಲ ಸ್ವತಃ ಕಂಗನಾ ಹಾಡುವ ಮಾತಿನಿಂದಲೂ ವಿವಾದವಂತೂ ಆಗುತ್ತದೆ. ಪ್ರತಿ ಬಾರಿಯೂ ಪೂನಂ ಪಾಂಡೆ ಒಂದಿಲ್ಲೊಂದು ಗೋಳು ತೋಡಿಕೊಂಡು ಸುದ್ದಿ ಆಗುತ್ತಿದ್ದರು. ಈ ಬಾರಿ ಖ್ಯಾತ ನಟಿ ಪಾಯಲ್ ಸರದಿ. ಅವರ ಬದುಕಿನಲ್ಲಿ ಆದ ಅಚ್ಚರಿಯ ಸುದ್ದಿಯೊಂದನ್ನು ಹೇಳಿ ಸ್ವತಃ ಕಂಗನಾ ರಣಾವತ್ ಗೆ ಬೆಚ್ಚಿ ಬೀಳಿಸಿದ್ದಾಳೆ.
ಈ ಶೋನಲ್ಲಿ ಪಾಯಲ್ ಎಲಿಮಿನೇಷನ್ ಹಂತ ತಲುಪಿದ್ದಾರೆ. ಹಾಗಾಗಿ ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಗೊತ್ತಿರದ ಸತ್ಯ ಸಂಗತಿಯೊಂದನ್ನು ತಿಳಿಸಿ ಎಂದು ಕಂಗನಾ ಕೇಳಿದರು. ಅದಕ್ಕೆ ಉತ್ತರವಾಗಿ ಪಾಯಲ್, ತಾವು ಮಾಟ-ಮಂತ್ರ ಮಾಡಿಸಿದ್ದನ್ನು ಬಹಿರಂಗಪಡಿಸಿದರು.
“ನಾನು ಸಿನಿಮಾ ರಂಗದಲ್ಲಿ 15 ವರ್ಷಗಳಿಂದ ಇರುವೆ. ಇಲ್ಲಿ ಸೋಲು ಮತ್ತು ಗೆಲುವನ್ನೂ ಕಂಡಿರುವೆ. ಒಂದು ಹಂತದಲ್ಲಿ ನನ್ನ ವೃತ್ತಿ ಜೀವನ ಮುಳುಗತೊಡಗಿತ್ತು. ಆವಾಗ ನಾನು ಮಾಟ ಮಾಡಿಸಲು ಮುಂದಾದೆ. ಮುಂಬಯಿನಲ್ಲಿ ವಶೀಕರಣ ಮಾಡುವಂತಹ ವ್ಯಕ್ತಿಯನ್ನು ಸಂಪರ್ಕಿಸಿ ಒಬ್ಬ ನಿರ್ಮಾಪಕನ ಜತೆ ಕೆಲಸ ಮಾಡುವುದಕ್ಕಾಗಿ ನಾನು ವಶೀಕರಣ ಮಾಡಿದೆ’’ ಎಂದು ಹೇಳಿದರು ಪಾಯಲ್.
ಇದೇ ಸಂದರ್ಭದಲ್ಲಿ ಕಂಗನಾ ರಣಾವತ್ ಕೂಡ ತಮ್ಮ ಜೀವನದಲ್ಲಿ ನಡೆದ ಬ್ಲ್ಯಾಕ್ ಮ್ಯಾಸಿಕ್ ವಿಷಯವೊಂದನ್ನು ಹಂಚಿಕೊಂಡರು. ‘ಕಂಗನಾ ರಣಾವತ್ ಕೂಡ ಬ್ಲ್ಯಾಕ್ ಮ್ಯಾಸಿಕ್ ಮೂಲಕ ಬಾಲಿವುಡ್ ನ ಅನೇಕರನ್ನು ವಶೀಕರಣ ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ನನ್ನ ಬಾಯ್ ಫ್ರೆಂಡ್ ಕೂಡ ನನ್ನ ಮೇಲೆ ಇದೇ ರೀತಿ ಆರೋಪ ಮಾಡಿದ್ದ. 2016ರಲ್ಲಿ ನಾನೂ ಕೂಡ ಮಾಟ ಮಂತ್ರದ ಕಾರಣಕ್ಕಾಗಿ ಸಾಕಷ್ಟು ಸುದ್ದಿ ಆದೆ’ ಎಂದು ಹೇಳಿದರು.
ಕೊನೆಗೆ ಇದೆಲ್ಲವನ್ನೂ ಮಾಡಬೇಡಿ. ನಿಮಗೆ ಸೌಂದರ್ಯವಿದೆ. ಸೆಳೆಯುವಂತಹ ಶಕ್ತಿಯಿದೆ. ಬುದ್ಧಿವಂತರು, ಪ್ರತಿಭಾವಂತರು ಅದರ ಮೂಲಕ ಜನರನ್ನು ಗೆಲ್ಲಿರಿ. ಈ ಗೆಲುವು ಯಾವತ್ತಿಗೂ ಶಾಶ್ವತವಾಗಿ ಇರುತ್ತದೆ ಎಂದು ಪಾಯಲ್ ಗೆ ಬುದ್ದಿ ಹೇಳಿದರು ಕಂಗನಾ ರಣಾವತ್.