ಸಮಗ್ರ ನ್ಯೂಸ್: ಕೋವಿಡ್ ಕಾಲರ್ ಟ್ಯೂನ್ ಕೇಳಿ ಸುಸ್ತಾಗಿದ್ದ ಜನರಿಗೆ ಇದೀಗ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಅದೇನೆಂದರೆ, ಕೋವಿಡ್ ಕಾಲರ್ ಟ್ಯೂನ್‌ಗಳು ಇನ್ನು ಮುಂದೆ ಕೇಳಿಸುವುದಿಲ್ಲ. ಶೀಘ್ರದಲ್ಲೇ ಕಾಲರ್ ಟ್ಯೂನ್ಗೆ ಅಂತ್ಯ ಹಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ.
ಕೋವಿಡ್-19 ಕುರಿತು ಜಾಗೃತಿಗಾಗಿ ಟೆಲಿಕಾಂ ಆಪರೇಟರ್‌ಗಳು ಪರಿಚಯಿಸಿದ ಪ್ರೀ-ಕಾಲ್-ಆಡಿಯೋ ಜಾಹೀರಾತುಗಳು ಮತ್ತು ಕಾಲರ್-ಟ್ಯೂನ್‌ಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು. ದೇಶದಲ್ಲಿ ಕರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಕೋವಿಡ್ ಪೂರ್ವ ಕರೆ ಸಂದೇಶಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಕೋವಿಡ್ ಕಾಲರ್ ಟ್ಯೂನ್‌ಗಳಿಂದಾಗಿ ತುರ್ತು ಸಮಯದಲ್ಲಿ ಬೇರೆಯವರಿಗೆ ಫೋನ್ ಕರೆಗಳನ್ನು ಮಾಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಲರ್ ಟ್ಯೂನ್‌ಗಳನ್ನು ಅಮಾನತುಗೊಳಿಸಲು ಕೇಂದ್ರವು ಪರಿಗಣಿಸುತ್ತಿದೆ. ದೂರಸಂಪರ್ಕ ಇಲಾಖೆ ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.
ಭಾರತದ ಸೆಲ್ಯುಲರ್ ಆಪರೇಟರ್‌ಗಳ ಕೇಂದ್ರವು ಕಾಲರ್ ಟ್ಯೂನ್ ಅನ್ನು ಸ್ಥಗಿತಗೊಳಿಸಲು ಮೊಬೈಲ್ ಬಳಕೆದಾರರಿಂದ ಸ್ವೀಕರಿಸಿದ ವಿನಂತಿಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿವೆ. ಹೀಗಾಗಿ ಕಾಲರ್ ಟ್ಯೂಬ್ ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ. 2020 ರಿಂದ ಕೋವಿಡ್ ಕುರಿತ ಕಾಲರ್ ಟ್ಯೂನ್ ಹಲವು ಜನರ ಅತ್ಯಮೂಲ್ಯ ಸಮಯವನ್ನು ಕಸಿದುಕೊಂಡಿತ್ತು.