Ad Widget .

ನಾಳೆ(ಮಾ.28) SSLC ಪರೀಕ್ಷೆ ಶುರು| ಹಿಜಾಬ್ ಗಾಗಿ ಪರೀಕ್ಷೆ ತಪ್ಪಿಸಿದ್ರೆ ಮರು ಪರೀಕ್ಷೆ ಮಾಡಲ್ಲ – ಸಚಿವ ಬಿ.ಸಿ‌ ನಾಗೇಶ್

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್: ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರತಿವರ್ಷದಂತೆ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ ಎನ್ನುವ ವಿಶ್ವಾಸವಿದೆ. ಕೋರ್ಟ್ ಆದೇಶವನ್ನು ಪಾಲಿಸಿ ವಿದ್ಯಾರ್ಥಿಗಳು ಹಿಜಾಬ್ ಬಿಟ್ಟು ಸಮವಸ್ತ್ರದಲ್ಲಿ ಪರೀಕ್ಷೆ ಬರೆಯಬೇಕು. ಹಿಜಾಬ್ ಗಾಗಿ ಪರೀಕ್ಷೆ ತಿರಸ್ಕರಿಸಿದರೆ ಮತ್ತೆ ಮರು ಪರೀಕ್ಷೆ ಕೂಡ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

Ad Widget . Ad Widget . Ad Widget .

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಹಿಜಾಬ್ ಸಂಘರ್ಷದ ಕಾರಣದಿಂದಾಗಿ ಪರೀಕ್ಷಾ ಕೇಂದ್ರದ ಬಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಿಜಾಬ್ ಧರಿಸಿ ಬಂದರೆ ಅವರೇ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಹಿಜಾಬ್ ಧರಿಸಿ ಬಂದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯೋದಕ್ಕೆ ಅವಕಾಶವಿಲ್ಲ. ಸಮವಸ್ತ್ರದಲ್ಲಿ ಬಂದರೆ ಮಾತ್ರ ತರಗತಿಗೆ ಅವಕಾಶ. ಸಮವಸ್ತ್ರವಿಲ್ಲದ ಶಾಲೆಗಳ ಬಗ್ಗೆ ಡಿಡಿಪಿಐ ತೀರ್ಮಾನವೇ ಅಂತಿಮವಾಗಿದೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ತಪ್ಪಿಸಿದರೆ ಮರು ಪರೀಕ್ಷೆ ಕೂಡ ಇಲ್ಲ ಎಂಬುದಾಗಿ ಹೇಳಿದರು.

ಪರೀಕ್ಷೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ‌ ಮಾತನಾಡಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಬೇಕು. ಗೊಂದಲಗಳಿಗೆ ಅವಕಾಶ ಮಾಡಿಕೊಡದೇ ಉತ್ತಮ ವಾಗಿ ಪರೀಕ್ಷೆ ಬರೆಯಿರಿ ಎಂದು ಹಾರೈಸಿದ್ದಾರೆ.

Leave a Comment

Your email address will not be published. Required fields are marked *