ಸಮಗ್ರ ನ್ಯೂಸ್.ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗ ಅದಕ್ಕೆ ಪ್ರತಿಯಾಗಿ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದು ಎಲ್ಲೆಡೆ ಸುದ್ದಿಯಾಗಿತ್ತು.
ಇದೀಗ ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಮುಸ್ಕಾನ್ ಇದೀಗ ಪದವಿ ಪರೀಕ್ಷೆಗೆ ಗೈರಾಗಿದ್ದಾರೆ. ಈ ಮೂಲಕ ಕರ್ನಾಟಕ ಹೈಕೋರ್ಟ್ ನೀಡಿದ್ದ ಹಿಜಾಬ್ ತೀರ್ಪು ವಿರೋಧಿಸಿದ್ದಾಳೆ.
ಕಾಲೇಜಿನಲ್ಲಿ ಹಿಜಾಬ್ ಅವಕಾಶ ಕೊಡದಕ್ಕೆ ಕಾಲೇಜಿಗೆ ಕಳುಹಿಸಲ್ಲ ಮುಸ್ಕಾನ್ ತಂದೆ ಎಂದು ಹೇಳಿದ್ದಾರೆ. ಅಲ್ಲದೇ ಬೇರೆ ಕಾಲೇಜಿಗೆ ಸೇರಿಸುವ ಬಗ್ಗೆಯು ಕುಟುಂಬಸ್ಥರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಮುಸ್ಕಾನ್ ಅವರನ್ನ ಪರೀಕ್ಷೆಗೆ ಕಳುಹಿಸಿಲ್ಲ ಎನ್ನಲಾಗುತ್ತಿದೆ.
ಶಿಕ್ಷಣಕ್ಕಿಂತ ನಮಗೆ ಹಿಜಬ್ ಮುಖ್ಯ ಎಂದು ಹೇಳಿ ಈಗಾಗಲೇ ಕರ್ನಾಟಕದ ಹಲವು ಕಡೆ ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿನಿಯರು ಗೈರಾಗುತ್ತಿದ್ದಾರೆ.
ಮಂಡ್ಯದ ಪಿಇಎಸ್ ಕಾಲೇಜು ಆವರಣದಲ್ಲಿ. ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಕ್ಕೆ ಘೋಷಿಸಿತ್ತು. ಇದು ದೇಶಾದ್ಯಂತ ಸುದ್ದಿಯಾಗಿದ್ರು. ಅನೇಕ ಮುಸ್ಲಿಂ ಮುಖಂಡರು, ಕಾಂಗ್ರೆಸ್ ನಾಯಕರು ಶ್ಲಾಘಿಸಿದ್ದರು. ಅಲ್ಲದೇ ಮುಸ್ಲಿಂ ಸಂಘಟನೆಯೊಂದು ಯುವತಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡಿತ್ತು. ಸಾಲದಕ್ಕೆ ಮುಸ್ಕಾನ್ ನಿವಾಸಕ್ಕೆ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದ ಶಾಸಕ ಜಿಶಾನ್ ಸಿದ್ದಿಕ್ ಭೇಟಿ ನೀಡಿದ್ದರು. ಈ ವೇಳೆ ಐ ಫೋನ್, ಸ್ಮಾರ್ಟ್ವಾಚ್ ಗಿಫ್ಟ್ ನೀಡಿ ಅಭಿನಂದಿಸಿದ್ದರು.