ಸಮಗ್ರ ನ್ಯೂಸ್: ಹಿಜಾಬ್ ವಿವಾದವನ್ನು ಮುಂದುವರಿಸುವ, ಪ್ರಚೋದಿಸುವ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಹಿಜಾಬ್ ವಿವಾದಕ್ಕೆ ಪ್ರಚೋದನೆ ನೀಡುವ ಸಂಘಟನೆಗಳ ಚಟುವಟಿಕೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ, ಅವುಗಳನ್ನು ನಿಷೇಧಿಸುವ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಂಘಟನೆಗಳು ಮಕ್ಕಳನ್ನು ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸುವ ಮಟ್ಟಕ್ಕೆ ಇಳಿದಿದ್ದಾರೆ. ಪೋಷಕರು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ.
ಇನ್ನು ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಮುಸ್ಲಿಂ ಸಂಘಟನೆಗಳು, ಸಂಸ್ಥೆಗಳು ತೀರ್ಪನ್ನು ವಿರೋಧಿಸಿದೆ, ಎಸ್ ಡಿಪಿಐ, ಪಿಎಫ್ ಐ, ಎಸ್ಸೆಸ್ಸೆಫ್, ಎಸ್ಕೆ ಎಸ್ಸೆಸ್ಸೆಪ್, ಜಮಾಅತ್, ಮುಸ್ಲಿಂ ಸೆಂಟ್ರಲ್ ಕಮೀಟಿ ಸೇರಿದಂತೆ ಹಲವು ಸಂಘಟನೆ ಹೈಕೋರ್ಟ್ ತೀರ್ಪನ್ನು ತಿರಸ್ಕರಿಸಿದೆ.
ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ಹಿಜಾಬ್ ವಿವಾದವನ್ನು ನ್ಯಾಯ ಸಿಗುವವರೆಗೂ ಮುಂದುವರಿಸುವುದಾಗಿ ಹೇಳಿದೆ. ಇದೀಗ ಗೃಹ ಸಚಿವರ ಹೇಳಿಕೆ ಸಂಘಟನೆಗಳ ಬ್ಯಾನ್ ಕುರಿತಾಗಿದ್ದು, ರಾಜ್ಯದಲ್ಲಿ ಪ್ರಚೋದನಾತ್ಮಕ ಮಾತುಗಳನ್ನಾಡುವ ಸಂಘಟನೆಗಳು ನಿಷೇದವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.