ಸಮಗ್ರ ನ್ಯೂಸ್: ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ಮಂಗಳೂರಿನ ವ್ಯಕ್ತಿಯೊಬ್ಬ 1.92 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಮೂಲಕ ವಂಚಕರ ಇನ್ನೊಂದು ಮುಖವಾಡ ಬಯಲಾಗಿದೆ.
ನೀವೆನಾದರೂ ಗೂಗಲ್‌ನಲ್ಲಿ ಹೆಲ್ಪ್ ಲೈನ್ ನಂಬರ್‌ಗಳಿಗೆ ಸರ್ಚ್ ಮಾಡುತ್ತಿದ್ದರೆ ಒಮ್ಮೆ ಆಲೋಚಿಸುವುದು ಉತ್ತಮ. ಏಕೆಂದರೆ ಸೈಬರ್ ವಂಚಕರು ಗೂಗಲ್‌ನಲ್ಲೇ ಫೇಕ್ ಹೆಲ್ಪ್ ಲೈನ್ ನಂಬರ್ ಹಾಕಿ ಹಣ ದೋಚಲು ಶುರು ಮಾಡಿದ್ದಾರೆ.
ಗೂಗಲ್‌ನಲ್ಲಿ ಹೆಲ್ಪ್ ಲೈನ್, ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡುವ ಮೊದಲು ಹತ್ತು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸೈಬರ್ ವಲ್ಚರ್‌ಗಳು ಬ್ಯಾಂಕ್ ಖಾತೆಗಳಿಂದ ಹಣ ದೋಚಲು ನಕಲಿ ಹೆಲ್ಪ್ ಲೈನ್, ಕಸ್ಟಮರ್ ಕೇರ್ ನಂಬರ್‌ಗಳು ಗೂಗಲ್ ಸರ್ಚ್‌ನಲ್ಲಿ ಮೊದಲು ಬರುವಂತೆ ನೋಡಿಕೊಳ್ಳುತಿದ್ದಾರೆ.
2 ಕ್ರೆಡಿಟ್ ಕಾರ್ಡ್ ಹೊಂದಿರುವ ಮಂಗಳೂರಿನ ವ್ಯಕ್ತಿಯೊಬ್ಬರು ಒಂದನ್ನು ಬ್ಲಾಕ್ ಮಾಡುವ ಉದ್ದೇಶದಿಂದ ಗೂಗಲ್‌ನಲ್ಲಿ ಆ ಬ್ಯಾಂಕ್‌ನ ಕಸ್ಟಮರ್ ಕೇರ್ ನಂಬರ್‌ನ್ನು ಹುಡುಕಿ ಕರೆ ಮಾಡಿದ್ದರು. ಕರೆಯನ್ನು ರಿಸೀವ್ ಮಾಡಿದ ವ್ಯಕ್ತಿಯು ‘ಎನಿ ಡೆಸ್ಕ್ ಆಯಪ್’ ಡೌನ್ ಲೋಡ್ ಮಾಡುವಂತೆ ತಿಳಿಸಿದ್ದ. ಬಳಿಕ ಕ್ರೆಡಿಟ್ ಕಾರ್ಡ್ ನಂಬರ್ ಪಿನ್ ವಿವರ ಹಾಕುವಂತೆ ತಿಳಿಸಿದ್ದನು. ವಿವರ ಹಾಕುವಷ್ಟರಲ್ಲೇ ಖಾತೆಯಿಂದ 1.92 ಲಕ್ಷ ರೂಪಾಯಿ ಮಂಗಮಾಯವಾಗಿದೆ.
ಈ ರೀತಿಯ ಹಲವಾರು ಪ್ರಕರಣಗಳು ನಡೆದಿದ್ದರೂ ಹೆಚ್ಚಿನ ಜನರು ಪ್ರಕರಣ ದಾಖಲಿಸಿಲ್ಲ. ಕಷ್ಟದಲ್ಲಿರುವವರ ಆತಂಕ ಗೊಂದಲಗಳನ್ನೇ ಈ ಸೈಬರ್ ವಂಚಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಹೈಲ್ಪ್ ಲೈನ್ ಅಥವಾ ಕಸ್ಟಮರ್ ಕೇರ್ ನಂಬರ್‌ಗೆ ಕಾಲ್ ಮಾಡುವ ಮೊದಲು ಜಾಗರೂಕರಾಗಿರಬೇಕಿದೆ.