ಸಮಗ್ರ ನ್ಯೂಸ್: ಮಂಗಳೂರಿನ ರಥಬೀದಿಯಲ್ಲಿರುವ ಡಾ.ಪಿ, ದಯಾನಂದ, ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್ ಧರಿಸಿ ಪ್ರವೇಶಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ, ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಪ್ರಶ್ನಿಸಿ ಗೊಂದಲಗೊಂಡ ಬೆನ್ನಲ್ಲೇ ವಿರೋದಿಸಿದ ವಿದ್ಯಾರ್ಥಿ ಹೆಸರಲ್ಲಿ ಕಿಡಿಗೇಡಿಗಳು ಶ್ರಧ್ದಾಂಜಲಿ ಪೋಸ್ಟ್ ಮಾಡಿದ್ದಾರೆ. ವಿದ್ಯಾರ್ಥಿ ಸಾಯಿ ಸಂದೇಶ ಎಂಬಾತ ಹಿಜಾಬ್ ಧಾರಣೆ ಪ್ರಶ್ನಿಸಿ ವಿರೋಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತನ ವಿರುದ್ಧ ಇನ್ಸ್ಟಾಗ್ರಾಂ ನಲ್ಲಿ ಫೊಟೋ ಹಾಕಿ ಶ್ರದ್ಧಾಂಜಲಿ ಸಾಯಿ ಸಂದೇಶ ಎಂಬ ತಲೆಬರಹ ಹಾಕಿ ಅದರ ಕೆಳಗಡೆ “ಮಂಗಳೂರಿನಲ್ಲಿ ಬೀಳಲಿದೆ ಮತ್ತೊಂದು ಹೆಣ” ಎಂಬ ಪೋಸ್ಟ್ ಹಾಕಿದ ಘಟನೆ ನಡೆದಿದೆ.
ಘಟನೆ ಕುರಿತಂತೆ ದೀಕ್ಷಿತ್ ಎಂಬವರು ನೀಡಿದ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಜಾಬ್ ಪ್ರಕರಣದ ಕುರಿತು ಹೈಕೋರ್ಟ್ ಯಾವುದೇ ಧಾರ್ಮಿಕ ವಸ್ತ್ರ ಕಾಲೇಜಿನಲ್ಲಿ ಧರಿಸುವಂತಿಲ್ಲ ಎಂದು ಮಧ್ಯಂತರ ತೀರ್ಪನ್ನು ನೀಡಿತ್ತು. ಈ ನಡುವೆ ಕೆಲವು ವಿದ್ಯಾರ್ಥಿನಿಯರು ಕಾಲೇಜಿನ ತರಗತಿಯನ್ನು ಹಿಜಾಬ್ ಧರಿಸಿ ಪ್ರವೇಶಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ, ಅದೇ ಕಾಲೇಜಿನ ವಿದ್ಯಾರ್ಥಿಯಾದ ಸಾಯಿ ಸಂದೇಶ ಎಂಬುವವರು ಪ್ರಶ್ನಿಸಿ ವಿರೋಧಿಸಿದ್ದು, ಈ ಬಗ್ಗೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಸಹಿಸಲಾಗದ ಕಿಡಿಗೇಡಿಗಳು ಇನ್ಸ್ಟಾಗ್ರಾಂ mari gudi 5 ಎಂಬ ನಕಲಿ ಖಾತೆಯಲ್ಲಿ ಸಾಯಿ ಸಂದೇಶ್ ನ ಭಾವಚಿತ್ರವಿರುವ ಪೋಸ್ಟ್ ಹಾಕಿ ಅದರಲ್ಲಿ, “ಶ್ರದ್ಧಾಂಜಲಿ ಸಾಯಿ ಸಂದೇಶ’ ಎಂಬ ತಲೆಬರಹ ಹಾಕಿ ಕೆಳಗಡೆ “ಮಂಗಳೂರಿನಲ್ಲಿ ಬೀಳಲಿದೆ ಮತ್ತೊಂದು ಹೆಣ, ನಾಯಿ ಸಂದೇಶನ ಹೆಣ ಮಂಗಳೂರಿನ ಯಾವುದಾದರೂ ಚರಂಡಿಯಲ್ಲಿ ಸಿಗುವುದು ಖಂಡಿತ. 100 %” ಎಂಬುದಾಗಿ ಕೊಲೆ ಬೆದರಿಕೆಯ ಪೋಸ್ಟ್ ಹಾಕಿದ್ದಾರೆ.
ಸಾಯಿ ಸಂದೇಶ್‌ಗೆ ಜೀವಬೆದರಿಕೆ ಕರೆ..!
ವಿರೋಧಿಸಿದ ವಿದ್ಯಾರ್ಥಿಗೆ ಬೇರೆ ಬೇರೆ ನಂಬರ್‌ಗಳಿಂದ ಕರೆ ಬರುತ್ತಿದ್ದು ಅವಾಚ್ಯ ಶಬ್ಧಗಳಿಂದ ಕಿಡಿಗೇಡಿಗಳು ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ನಿನ್ನ ಎಲ್ಲಾ ಡೀಟೈಲ್ ಸಿಕ್ಕಿದೆ, ಎಲ್ಲಿಗೆ ಹೋಗುತ್ತಿಯಾ, ಎಲ್ಲಿಗೆ ಬರುತ್ತಿಯಾ ಅಂತ ಒಂದು ವಾರದೊಳಗೆ ನಿನ ಗೇಮ್ ಪಿನೀಷ್ ಮಾಡುವ. ನೀನು ಒಂದೇ ಅಮ್ಮನಿಗೆ ಹುಟ್ಟಿದವನಾಗಿದ್ದರೆ, ನಿನ್ನ ತಾಯಿ ಪತಿವೃತೆಯಾಗಿದ್ದರೆ ನಮ್ಮ ಕೈಯಿಂದ ತಪ್ಪಿಸು ನೋಡುವಾ’ ಮತ್ತು ಇತರೆ ಅವಾಚ್ಯ ಶಬ್ಧಗಳಿಂದ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೀವಬೆದರಿಕೆ, ಇನ್ಸ್ಟಾಗ್ರಾಮ್ ಖಾತೆ ಹಾಗೂ ಧಮ್ಕಿ ಹಾಕಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.