ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಚೊಚ್ಚಲ ಬಜೆಟ್ ಮಂಡನೆ ಮಾಡಿದರು. ಬಜೆಟ್ ಮಂಡನೆ ಪ್ರಾರಂಭಿಸುವ ಮುನ್ನ ಸಿಎಂ ಬೊಮ್ಮಾಯಿ ಸರ್ಕಾರದ ಹಾಗೂ ಸರ್ಕಾರದ ಆಡಳಿತದ ಕುರಿತು ಮಾತನಾಡಿ, ಸ್ಥಿರ, ದಕ್ಷ ಆಡಳಿತದಿಂದ ಸರ್ಕಾರ ಯಶಸ್ವಿಯಾಗಿ ನಡೆಯುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾಯಕತ್ವದಿಂದ ಕೋವಿಡ್-19 ನಿರ್ವಹಣೆಗೊಂಡಿದ್ದು, ರಾಜ್ಯದಲ್ಲಿ ಮಾಡಿದ ಎಲ್ಲಾ ಪ್ರಯೋಗಗಳು ಯಶಸ್ಸು ಕಂಡಿದೆ ಎಂದಿದ್ದಾರೆ. 2022-23ರಲ್ಲಿ ರಾಜ್ಯದ ಆರ್ಥಿಕತೆಯಲ್ಲಿ ಎಲ್ಲಾ ಸ್ಥರದ ಜನರು ಭಾಗಿ ಹಾಗೂ ದುರ್ಬಲ ವರ್ಗದ ಅಭಿವೃದ್ಧಿಗೆ, ಶಿಕ್ಷಣ, ಉದ್ಯೋಗ, ಸಬಲೀಕರಣವನ್ನು ಗಮನದಲ್ಲಿಟ್ಟು ಕೊಂಡು 3E ಸೂತ್ರ ಜಾರಿಯಾಗಿರುವುದರ ಬಗ್ಗೆ ಸಿಎಂ ಬೊಮ್ಮಾಯಿ ಪ್ರಸ್ತಾಪ ಮಾಡಿದ್ದಾರೆ.
ಬಜೆಟ್ ಪ್ರಮುಖಾಂಶ:
ಒಟ್ಟು ಬಜೆಟ್ ಗಾತ್ರ ₹2,61,977 ಕೋಟಿ
ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂಪಾಯಿ ಮೀಸಲು
ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ.
ಆರ್ಥಿಕ ಅಭಿವೃದ್ಧಿಗೆ ಉತ್ತೇಜನಗೆ 55,657 ಕೋಟಿ ರೂ.
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 68,479 ಕೋಟಿ ರೂ.
ಸಂಸ್ಕೃತಿ ಪರಂಪರೆ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಗೆ 3,102 ಕೋಟಿ ರೂ.
ಮಹಿಳಾ ಸಬಲೀಕರಣ, ಕ್ಷೇಮಾಭಿವೃದ್ಧಿಗೆ 43,188 ಕೋಟಿ ರೂ.
ಮಕ್ಕಳ ಅಭ್ಯುದಯಕ್ಕೆ -40, 944 ಕೋಟಿ ರೂ.
ಆರೋಗ್ಯ, ಶಿಕ್ಷಣ ಮತ್ತು ಕೌಶಾಲ್ಯಭಿವೃದ್ಧಿ -6,329 ಕೋಟಿ ಹೆಚ್ಚುವರಿ ಅನುದಾನ
ರೈತ ಶಕ್ತಿ ನೂತನ ಯೋಜನೆ ಘೋಷಣೆ – 600 ಕೋಟಿ ಅನುದಾನ
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮುಖ್ಯಾಂಶಗಳು..
ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲಿ 438 ನಮ್ಮ ಕ್ಲಿನಿಕ್ಗಳ ಸ್ಥಾಪನೆ
ಮಹಿಳೆಯರ ಆರೋಗ್ಯಕ್ಕಾಗಿ 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ
ಬಡ ಹಿರಿಯ ನಾಗರಿಕರಿಗೆ ಉಚಿತ ಕಣ್ಣು ತಪಾಸಣೆ, ಚಿಕಿತ್ಸೆ, ಕನ್ನಡಕ
ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಕೇಂದ್ರ
ಬೆಳಗಾವಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಕೇಂದ್ರ
ಆಯ್ದ 10 ಮೆಡಿಕಲ್ ಕಾಲೇಜುಗಳಲ್ಲಿ ಕೀಮೋಥೆರಪಿ ಸೆಂಟರ್
ತುಮಕೂರಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಸೆಂಟರ್
75 ತಾಲೂಕು ಆಸ್ಪತ್ರೆಗಳಲ್ಲಿ ಜಯದೇವ ಸಹಯೋಗದೊಂದಿಗೆ ಹೃದಯ ಸಂಬಂಧಿ ಚಿಕಿತ್ಸೆ
ಜಿಲ್ಲಾ ಮಟ್ಟದಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಆರಂಭ
4 ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಆರೋಗ್ಯ ವಾಹಿನಿ ಸಂಚಾರಿ ಕ್ಲಿನಿಕ್
ಬೀದರ್, ಚಾಮರಾಜನಗರ, ಹಾವೇರಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂಚಾರಿ ಕ್ಲಿನಿಕ್
ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ನೀಟ್ ಪರೀಕ್ಷೆಗೆ ತರಬೇತಿ
ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕ ನಿಗದಿಗೆ ಸಮಿತಿ
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಮುಖ್ಯಾಂಶಗಳು..
ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳ ಉನ್ನತೀಕರಣ
ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ.
ನೋಡಿ ಕಲಿ, ಮಾಡಿ ತಿಳಿ ಯೋಜನೆಯಡಿ ಶಾಲೆಗಳಿಗೆ ಕಿಟ್
169 ಸರ್ಕಾರಿ ಬಾಲಕೀಯರ ಪ್ರೌಢ ಶಾಲೆಗಳಿಗೆ ಲ್ಯಾಬ್ ಇನ್ ಎ ಕಿಟ್
7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣ
ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಾಗಿ ಉನ್ನತೀಕರಣ
ವಿನೂತನ ಮಾದರಿಯ 7 ವಿಶ್ವವಿದ್ಯಾಲಯಗಳ ಸ್ಥಾಪನೆ
ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ 7 ವಿವಿಗಳ ಸ್ಥಾಪನೆ
ಹೆಚ್ಚುತ್ತಿರುವ ಅಪೌಷ್ಟಿಕತೆ ಸಮಸ್ಯೆಯನ್ನು ತಡೆಯುವ ಸಲುವಾಗಿ..
ಪೌಷ್ಟಿಕ ಕರ್ನಾಕಟ ಯೋಜನೆಯಡಿ ಸಾರವರ್ಧಿತ ಅಕ್ಕಿ ವಿತರಣೆ
ಬಾಲ್ಯ ವಿವಾಹ, ಬಾಲಕಿಯರ ಶಾಲೆ ಬಿಡುವುದನ್ನ ತಪ್ಪಿಸಲು ಸ್ಫೂರ್ತಿ ಯೋಜನೆ ವಿಸ್ತರಣೆ
ರಸ್ತೆ ಮತ್ತು ರೈಲು ಮಾರ್ಗ ಸಂಬಂಧಿಸಿದ ಮುಖ್ಯಾಂಶಗಳು..
2,275 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3,500 ಕೋಟಿ
1,008 ಕಿ.ಮೀ. ರಾಜ್ಯ ಹೆದ್ದಾರಿ ಮರುಡಾಂಬರೀಕರಣಕ್ಕೆ 440 ಕೋಟಿ
ಗದಗ-ಯಲಗವಿ ನೂತನ ರೈಲು ಮಾರ್ಗಕ್ಕೆ ಕೇಂದ್ರಕ್ಕೆ ಪ್ರಸ್ತಾಪವನೆ
ಬಂದರು
ಸಾಗರ ಮಾಲಾ ಯೋಜನೆಯಡಿ 1,880 ಕೋಟಿ ವೆಚ್ಚದಲ್ಲಿ 24 ಬಂದರು ಯೋಜನೆ
ಕಾರವಾರ ಬಂದರು ವಿಸ್ತರಣೆ, ಬೈಂದೂರು, ಮಲ್ಪೆಗಳಲ್ಲಿ ವಿವಿಧೋದ್ದೇಶ ಬಂದರು
ಉ.ಕ. ಜಿಲ್ಲೆಯ ಮಾಜಾಳಿಯಲ್ಲಿ 220 ಕೋಟಿಯ ಮೀನುಗಾರಿಕಾ ಬಂದರು
ಕಾರವಾರದಲ್ಲಿ ಮೊದಲ ಜಲ ಸಾರಿಗೆ, ಮೀನುಗಾರಿಕಾ ತರಬೇತಿ ಸಂಸ್ಥೆ
ಸಂಸ್ಕೃತಿ-ಸಾಹಿತ್ಯ
ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ
ಕಾಸರಗೋಡು, ತೆಕ್ಕಲಕೋಟೆ, ಗೋವಾದಲ್ಲಿ ಕನ್ನಡ ಭವನ ನಿರ್ಮಾಣ
ಯುವ ಸಬಲೀಕರಣ-ಕ್ರೀಡೆ
ಸ್ವ ಉದ್ಯೋಗ, ಆರ್ಥಿಕ ಚಟುವಟಿಕೆಗೆ ಯುವಕರ ಸ್ವ ಸಹಾಯ ಗುಂಪು ರಚನೆ
ಗ್ರಾ.ಪಂ.ಗೆ ಒಂದರಂತೆ ಸ್ವಾಮಿ ವಿವೇಕಾನಂದ ಯುವಕರ ಸ್ವಸಹಾಯ ಗುಂಪು
ರಾಜ್ಯ, ಜಿಲ್ಲಾ ಕೀಡಾಂಗಣಗಳ ಉನ್ನತೀಕರಣಕ್ಕೆ 100 ಕೋಟಿ ರೂಪಾಯಿ
ದೇಸಿ ಕ್ರೀಡೆಗಳ ಉತ್ತೇಜನಕ್ಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕ್ರೀಡಾ ಅಂಕಣ ನಿರ್ಮಾಣ
ಶಿವಮೊಗ್ಗದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪನೆಗೆ 20 ಕೋಟಿಯ ಅನುದಾನ
ಕುಸ್ತಿ ಕ್ರೀಡಾಪಟುಗಳಿಗೆ ನೀಡುತ್ತಿರುವ ಮಾಸಾಶನವನ್ನು ₹1000ದಷ್ಟು ಹೆಚ್ಚಳ
ಪರಿಸರ
ಜೀವಿಶಾಸ್ತ್ರ ವ್ಯವಸ್ಥೆಯ ದುಷ್ಪರಿಣಾಮ ತಡೆಯಲು ಕ್ರಮ
ಇದಕ್ಕಾಗಿ ಮೊದಲ ಬಾರಿ 100 ಕೋಟಿಯ ಗ್ರೀನ್ ಬಜೆಟ್ ಮಂಡನೆ
ಆಡಳಿತ ಸುಧಾರಣೆ
ಕೃಷಿ ಜಮೀನು ಸಮೀಕ್ಷೆಗೆ ಡ್ರೋನ್ ಮೂಲಕ ಸರ್ವೆಗೆ ಕ್ರಮ
ಡ್ರೋನ್ ಸರ್ವೆ ಯೋಜನೆಗೆ 287 ಕೋಟಿ ರೂ ಅನುದಾನ
ಭಕ್ತಾದಿಗಳ ಬೇಡಿಕೆಯಂತೆ ಮುಜರಾಯಿ ಇಲಾಖೆಯ ದೇವಾಲಗಳಿಗೆ ಸ್ವಾಯತ್ತತೆ
ದೇವಾಲಯಗಳ ಅಭಿವೃದ್ಧಿಗೆ 158 ಕೋಟಿ ರೂಪಾಯಿ ಅನುದಾನ
ಅಗ್ನಿ ಶಾಮಕ ಸಿಬ್ಬಂದಿಯ ವಿಮಾ ಮೊತ್ತ 1 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ
ತೆರಿಗೆ
ಈ ಆರ್ಥಿಕ ವರ್ಷದಲ್ಲಿ ಯಾವುದೇ ತೆರಿಗೆ ಹೆಚ್ಚಳ ಇಲ್ಲ
ವಾಣಿಜ್ಯ ತೆರಿಗೆ ಇಲಾಖೆಗೆ 77,010 ಕೋಟಿ ಸಂಗ್ರಹ ಗುರಿ
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ
ರಾಜ್ಯ ಅಬಕಾರಿ ಇಲಾಖೆಗೆ 29 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಗುರಿ
ರಾಜ್ಯ ಸಾರಿಗೆ ಇಲಾಖೆಗೆ 8,007 ಕೋಟಿ ರೂ. ತೆರಿಗೆ ಸಂಗ್ರಹ ಗುರಿ
ಬೆಂಗಳೂರಿಗೆ ಏನ್ ಕೊಡುಗೆ..?
ಬನಶಂಕರಿ ಜಂಕ್ಷನ್‌ನಲ್ಲಿ 45 ಕೋಟಿ ವೆಚ್ಚದಲ್ಲಿ ಸ್ಕೈವಾಕರ್ ನಿರ್ಮಾಣ
ನೆನೆಗುದಿಗೆ ಬಿದ್ದಿರುವ 73 ಕಿ.ಮೀ ಉದ್ದ ಪೆರಿಫೆರಲ್ ರಿಂಗ್ ರೋಡ್ ಕಾಮಗಾರಿ ಆರಂಭ
ಇದಕ್ಕಾಗಿ 21,091 ಕೋಟಿ ಅನುದಾನ ಮೀಸಲು
NGEF ಆವರಣದಲ್ಲಿ ಸಿಂಗಪೂರ ಮಾದರಿಯಲ್ಲಿ ಗ್ರೀನ್ ಎಕ್ಸ್‌ಪೋ
ಯಲಹಂಕ ಬಳಿಯ ಜಾರಕಬಂಡೆ ಕಾವಲಿನಲ್ಲಿ ವಾಜಪೇಯಿ ಉದ್ಯಾನವನ ಅಭಿವೃದ್ಧಿ
ಸುಮಾರು 350 ಎಕರೆ ವಿಸ್ತೀರ್ಣದಲ್ಲಿ ಈ ಉದ್ಯಾನವನ ಅಭಿವೃದ್ಧಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ಸ್ವತ್ತುಗಳನ್ನ ಎ ಖಾತೆಗೆ ವರ್ಗಾಯಿಸಲು ಕಾನೂನು ಕ್ರಮ
ಬೆಂಗಳೂರಿನ 4 ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಬೆಂಗಳೂರಿನ ಆಯ್ದ 20 ಶಾಲೆಗಳನ್ನ ಬೆಂಗಳೂರು ಪಬ್ಲಿಕ್ ಶಾಲೆಗಳಾಗಿ ಅಭಿವೃದ್ಧಿ
ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿಗೆ 6000 ಕೋಟಿ ರೂ.
1,500 ಕೋಟಿ ರೂ ವೆಚ್ಚದಲ್ಲಿ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕ ಉನ್ನತೀಕರಣ
ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನಕ್ಕೆ 312 ಕೋಟಿ ರೂ.
ಕೆ.ಆರ್ ಮಾರುಕಟ್ಟೆ ಜಂಕ್ಷನ್‌ನಿಂದ ಬೆಳ್ಳಂದೂರು ಕೆರೆವರೆಗೆ ರಾಜಕಾಲುವೆ ಅಬಿವೃದ್ಧಿ
ಈ ರಾಜಕಾಲುವೆ ಅಬಿವೃದ್ಧಿಗಾಗಿ 195 ಕೋಟಿ ರೂ. ಅನುದಾನ
ಅಮೃತ್ ನಗರೋತ್ಥಾನ ಯೋಜನೆಯಡಿ ರಾಜಕಾಲುವೆ ಅಭಿವೃದ್ಧಿ- 1500 ಕೋಟಿ
ಇತರೆ ಪ್ರಮುಖಾಂಶ
ಮಳೆಗಾಲದ ಹಾನಿಯಾದ ರಸ್ತೆ ಸುಧಾರಣೆಗೆ 300 ಕೋಟಿ ರೂ.
ಗ್ರಾಮೀಣ ರಸ್ತೆಗಳ ಸುಧಾರಣೆಗೆ 1600 ಕೋಟಿ ರೂ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3000 ಕೋಟಿ
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ – 3,885 ಕೋಟಿ
ಶರಾವತಿ ಸಂಕೀರ್ಣದಲ್ಲಿ 2000 ಮೆಗಾವ್ಯಾಟ್ ಸಾಮರ್ಥ್ಯದ ಭೂಗರ್ಭ ವಿದ್ಯುತ್ ಕೇಂದ್ರ
ಭೂಗರ್ಭ ವಿದ್ಯುತ್ ಕೇಂದ್ರ ಯೋಜನೆಗಾಗಿ 5,391 ಕೋಟಿ ರೂ.
ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2610 ಕೋಟಿ
ಕಟ್ಟಡ ಕಾರ್ಮಿಕರಿಗೆ 100 ಹೈಟೆಕ್ ಸಂಚಾರಿ ಕ್ಲಿನಿಕ್
ಕಟ್ಟಡ ಕಾರ್ಮಿಕರಿಗೆ ರಾಜ್ಯಾದ್ಯಂತ ರಿಯಾಯಿತಿ ಬಸ್ ಪಾಸ್ ಯೋಜನೆ
ಯಲ್ಲೋ ಬೋರ್ಡ್ ಚಾಲಕರ ಮಕ್ಕಳ ಶಿಕ್ಷಣಕ್ಕೆ ವಿದ್ಯಾನಿಧಿ ಯೋಜನೆ
5 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ 6,612 ಕೋಟಿ ರೂ
ಆಶಾ ರ್ಯಕರ್ತೆಯರಿಗೆ 1000 ಗೌರವಧನ ಹೆಚ್ಚಳ
ಗ್ರಾಮ ಸಹಾಯಕರಿಗೆ 1000 ಗೌರವಧನ ಹೆಚ್ಚಳ
ಬಿಸಿಯೂಟ ತಯಾರಕರಿಗೆ 1000 ಗೌರವಧನ ಹೆಚ್ಚಳ
ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ₹800 ಕೋಟಿ
ಪ್ರತಿ ಜಿಲ್ಲೆಯ ಅಲ್ಪಸಂಖ್ಯಾತರ ಒಂದು ಶಾಲೆಗೆ ಅಬ್ದುಲ್ ಕಲಾಂ ಹೆಸರು
ಈ ಶಾಲೆಗಳ ಸಿಬಿಎಸ್‌ಸಿ ಮಾನ್ಯತೆಗಾಗಿ ₹25 ಕೋಟಿ ಅನುದಾನ
ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ₹400 ಕೋಟಿ ಅನುದಾನ
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ
ಒಕ್ಕಲಿಕ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ
ಮರಾಠ ಅಭಿವೃದ್ಧಿ 50 ಕೋಟಿ ಅನುದಾನ
ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ 50 ಕೋಟಿ ಅನುದಾನ
ಜೈನ, ಸಿಖ್, ಬೌದ್ಧ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಅನುದಾನ
ಪಡಿತರ 5 ಕೆಜಿ ಅಕ್ಕಿ ಜೊತೆ ಒಂದು ಕೆಜಿ ರಾಗಿ ಅಥವಾ ಜೋಳ
ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಾಶನ 600 ರಿಂದ 800 ರೂಗೆ ಏರಿಕೆ
ಌಸಿಡ್ ದಾಳಿಗೆ ಒಳಗಾದ ಮಹಿಳೆಯ ಮಾಶಾಸನ 10 ಸಾವಿರ ರೂ.ಗೆ ಏರಿಕೆ
ಸ್ವಸಹಾಯ ಸಂಘಗಳಿಗೆ 500 ಕೋಟಿ ಅನುದಾನ
ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ
ಕಲಬುರ್ಗಿ ಮತ್ತು ವಿಜಯಪುರದಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್
ನವಲಗುಂದ ಮತ್ತು ರಾಣೆಬೆನ್ನೂರಿನಲ್ಲಿ ಜವಳಿಪಾರ್ಕ್ ಸ್ಥಾಪನೆ
ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್ ಸ್ಥಾಪನೆಗೆ 20 ಕೋಟಿ ರೂ.
ಬೆಳಗಾವಿಯಲ್ಲಿ ಗ್ಲೋಬಲ್ ಎಮರ್ಜಿಂಗ್ ಟೆಕ್ನಾಲಜಿ ಸೆಂಟರ್ – 150 ಕೋಟಿ ಅನುದಾನ
ಮೈಸೂರಿನಲ್ಲಿ ದಿ ಗ್ಲೋಬಲ್ ಟೆಕ್ನಾಲಜಿ ಸೆಂಟರ್ -ಪ್ಲಗ್ & ಪ್ಲೇ – 30 ಕೋಟಿ