ಸಮಗ್ರ ನ್ಯೂಸ್: ಯೂಕ್ರೇನ್ನಲ್ಲಿ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಸಾವಿಗೀಡಾದ ಕರ್ನಾಟಕದ ವಿದ್ಯಾರ್ಥಿ, ಹಾವೇರಿ ಜಿಲ್ಲೆಯ ನವೀನ್ ಗ್ಯಾನಗೌಡರ ಅವರ ಸಾವನ್ನಪ್ಪಿದ್ದು, ವಿದ್ಯಾರ್ಥಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಯೂಕ್ರೇನ್ನಲ್ಲಿ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಯುವಕ ಬಲಿಯಾದ ಎಂಬುದು ತಿಳಿದು ಬರುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೃತನ ತಂದೆಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರ ಕಾರ್ಯಾಲಯ ಕೂಡ ಸ್ಪಂದಿಸಿದ್ದು, ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ರಷ್ಯಾದ ಕ್ಷಿಪಣಿಗೆ ಬಲಿಯಾದ ಕನ್ನಡಿಗ ನವೀನ್ ಶೇಖರಪ್ಪ ಅವರ ತಂದೆಗೆ ಕರೆ ಮಾಡಿ ಸಂತಾಪ ಸೂಚಿಸಿದ್ದಲ್ಲದೆ, ಸಾಂತ್ವನವನ್ನು ಹೇಳಿದ್ದಾರೆ. ಅಲ್ಲದೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕೂಡ ಸಂತಾಪ ಸೂಚಿಸಿ, ಸಾಂತ್ವನ ಹೇಳಿದ್ದಾರೆ.
ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸುವ ಸಾಧ್ಯತೆ ಇದೆ. ನವೀನ್ ಸಾವು ಹಿನ್ನೆಲೆಯಲ್ಲಿ ಈ ಉನ್ನತ ಸಭೆ ನಡೆಸಲಾಗುತ್ತಿದೆ. ಉಕ್ರೇನ್ನಲ್ಲಿ ಸಿಲುಕಿರೋ ಭಾರತೀಯರನ್ನು ಹೇಗೆ ಯಾವುದೇ ಸಾವು ನೋವು ಸಂಭವಿಸದೆ ರಕ್ಷಿಸಬೇಕು ಎಂಬ ಸಭೆ ಇದಾಗಿದೆ. ಇಲ್ಲಿ ರಷ್ಯಾ ವಿರುದ್ಧ ಒಂದು ನಿರ್ಧಾರಕ್ಕೆ ಬರುವ ನಿರೀಕ್ಷೆಯೂ ಇದೆ.