ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ತಮ್ಮ ಒಂದು ತಿಂಗಳ ವೇತನವನ್ನು ನೀಡುತ್ತಿರುವುದಾಗಿ ಘೋಷಿಸಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಮತಾಂಧರ ದುಷ್ಕೃತ್ಯಕ್ಕೆ ಇಂದು ನಾವು ನಮ್ಮ ಯುವ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಈ ಸಂದರ್ಭದಲ್ಲಿ ನಾವು ಮಾಡಬಹುದಾದ ಕನಿಷ್ಠವೆಂದರೆ ಅವರ ಕುಟುಂಬವನ್ನು ಬೆಂಬಲಿಸುವುದು. ನನ್ನ 1 ತಿಂಗಳ ಸಂಬಳ ಮತ್ತು ಭತ್ಯೆಯನ್ನು ಹರ್ಷ ಅವರ ಕುಟುಂಬಕ್ಕೆ ನೀಡುತ್ತಿದ್ದೇನೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬದ ಬೆಂಬಲಕ್ಕೆ ನಿಲ್ಲೋಣ. ನೊಂದ ಕುಟುಂಬಕ್ಕೆ ಆಸರೆಯಾಗೋಣ.” ಎಂದು ಪೋಸ್ಟ್ ಹಾಕಿದ್ದಾರೆ