Ad Widget .

ಧರ್ಮಸ್ಥಳ:ಮತ್ತೆ ರಾಜಕೀಯ ಪ್ರಹಸನಕ್ಕೆ‌ ಸಾಕ್ಷಿಯಾಯ್ತು‌ ಮಂಜುನಾಥನ ಸನ್ನಿದಿ| ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಆಣೆ ಪ್ರಮಾಣ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥನ ದೇವಸ್ಥಾನ ಮತ್ತೆ ಆಣೆ ಪ್ರಮಾಣಕ್ಕೆ ಸಾಕ್ಷಿಯಾಗಿದೆ. ಸಾಗರ ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ‌ ಬೇಳೂರು ಗೋಪಾಲಕೃಷ್ಣ ನಡುವಿನ ಮರಳು ಮಾಫಿಯಾದ ಕಮಿಷನ್ ಪಡೆದ ಆರೋಪ ಪ್ರತ್ಯಾರೋಪ ಈಗ ಶ್ರೀಕ್ಷೇತ್ರ ಧರ್ಮಸ್ಥಳದ ದೇವರ ಕಟಕಟೆಗೆ ಬಂದು ನಿಂತಿದೆ.

Ad Widget . Ad Widget . Ad Widget .

ಈ ಆರೋಪ ಸುಳ್ಳು ಅಂತಾ ಶಾಸಕ ಹರತಾಳು ಹಾಲಪ್ಪ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಆಣೆ- ಪ್ರಮಾಣ ಮಾಡಿದರೆ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತ್ರ ಹರತಾಳು ಹಾಲಪ್ಪ ಕಮಿಷನ್ ಪಡೆದದ್ದು ನಿಜ. ಈ ಬಗ್ಗೆ ದೇವರೆದುರು ಪ್ರಮಾಣ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಮೊದಲು ಮಂಜುನಾಥನ ದರ್ಶನಕ್ಕೆ ಆಗಮಿಸಿದ ಶಾಸಕ ಹರತಾಳು ಹಾಲಪ್ಪ, ಮಂಜುನಾಥನ ದರ್ಶನ ಪಡೆದು ಆಣೆ- ಪ್ರಮಾಣ ಮಾಡಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಪಡೆದು ದೇವರ ಎದುರೇ ಆಣೆ ಪ್ರಮಾಣ ಮಾಡಿದ್ದಾರೆ. ರಾಹುಕಾಲಕ್ಕೂ ಮುನ್ನ ಶ್ರೀಕ್ಷೇತ್ರದಲ್ಲಿ ಹರತಾಳು ಹಾಲಪ್ಪ ಆಣೆ ಪ್ರಮಾಣ ಮಾಡಿದ್ದು, ತಮ್ಮ ಆಪ್ತರಾದ ವಿನಾಯಕ್ ರಾವ್ ಹಾಗು ಬಿ.ಟಿ. ರವೀಂದ್ರ ಅವರೊಂದಿಗೆ ಆಣೆ ಪ್ರಮಾಣ ಮಾಡಿದ್ದಾರೆ. ಮರಳು ಮಾಫಿಯಾದಿಂದ ತಾವಾಗಲಿ ತಮ್ಮ ಸಂಗಡಿಗರಾಗಲಿ ಕಮಿಷನ್ ಪಡೆದಿಲ್ಲ ಎಂದು ಆಣೆ- ಪ್ರಮಾಣ ಮಾಡಿದ್ದಾರೆ.

ಆಣೆ- ಪ್ರಮಾಣ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ವಿನಾಕಾರಣ ನನ್ನ ಮೇಲೆ ಬೇಳೂರು ಗೋಪಾಲಕೃಷ್ಣ ಆರೋಪ ಮಾಡುತ್ತಿದ್ದಾರೆ. ಆಣೆ- ಪ್ರಮಾಣದ ಸವಾಲು ಹಾಕಿ ಈಗ ಪಲಾಯನ ಮಾಡುತ್ತಿದ್ದಾರೆ. ಈಗ ಗೋವಾ ಚುನಾವಣೆಯ ಸಬೂಬು ಹೇಳುತ್ತಿದ್ದಾರೆ. ಬೇಳೂರು ಗೋಪಾಲಕೃಷ್ಣ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ದೇವರೆದುರು ನಾನು ಆಣೆ ಪ್ರಮಾಣ ಮಾಡಿದ್ದೇನೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ.

ಶಾಸಕ ಹಾಲಪ್ಪ ಆಣೆ ಪ್ರಮಾಣದ ಬಳಿಕ ದೇವಾಲಯಕ್ಕೆ ಆಗಮಿಸಿದ ಬೇಳೂರು ಗೋಪಾಲಕೃಷ್ಣ, ಶ್ರೀಮಂಜುನಾಥನ ದರ್ಶನ ಪಡೆದು ಆಣೆ- ಪ್ರಮಾಣ ಮಾಡಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ದೇವಾಲಯಕ್ಕೆ ಆಗಮಿಸಿದ ಬೇಳೂರು ಗೋಪಾಲಕೃಷ್ಣ, ಶಾಸಕ ಹರತಾಳು ಹಾಲಪ್ಪ ಕಮೀಷನ್ ಪಡೆದಿದ್ದು ನಿಜ ಎಂದು ದೇವರ ಎದುರು ಪ್ರಮಾಣ ಮಾಡಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ನಾವು ಬರುವತನಕ ಶಾಸಕರು ನಿಲ್ಲಬಹುದಿತ್ತು. ದೇವಾಲಯಕ್ಕೆ ಬಂದು ಓಡಿದ್ದು ಯಾಕೆ? ನೋಟಿಸ್ ನೀಡಿದ ಮೇಲೆ ನಾವು ಬರುವತನಕ ನಿಲ್ಲಬಹುದಿತ್ತು. ನಾನು ದೇವರೆದುರು ಆಣೆ ಪ್ರಮಾಣ ಮಾಡಲು ಬಂದಿದ್ದೇನೆ. ಮಂಜುನಾಥ ಸ್ವಾಮಿ ಎದುರು ಆಣೆ ಪ್ರಮಾಣ ಮಾಡಿದ್ದೇನೆ ಎಂದರು.

ಶಾಸಕ ಹಾಲಪ್ಪ ಅವರ ವಿರುದ್ಧ ನಾನು ಮಾಡಿರುವ ಆರೋಪಗಳು ಸತ್ಯ. ನನ್ನೊಂದಿಗೆ ಸಾಕ್ಷಿಗಳು ಬಂದಿದ್ದಾರೆ. ಕಮಿಷನ್ ನೀಡಿದವರು ಬಂದಿದ್ದಾರೆ. ಹಾಲಪ್ಪ ಅವರು ತಮ್ಮ ಆಪ್ತ ವಿನಾಯಕ್ ರಾವ್ ಅವರ ಮೂಲಕ ಮರಳು ಲಾರಿ ಮಾಲಕರಿಂದ ಕಮಿಷನ್ ಪಡೆದಿದ್ದಾರೆ. ದೇವರೆದುರು ಸಾಕ್ಷಿಯಾಗಿ ಆಣೆ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಹಾಲಪ್ಪ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು ಧರ್ಮಸ್ಥಳದಲ್ಲಿ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

Leave a Comment

Your email address will not be published. Required fields are marked *