Ad Widget .

ಲಿಪ್‌ಲಾಕ್ ಮಾಡಿದ ‘ಕಿಲಾಡಿ’ ರವಿತೇಜ| ಸಿನಿಮಾ ಪ್ರಮೋಷನ್ ಗೆ ಮುತ್ತಿನ ಮಳೆ

Ad Widget . Ad Widget .

ಸಮಗ್ರ ಫಿಲಂ ಡೆಸ್ಕ್: ತೆಲುಗಿನಲ್ಲಿ ತಯಾರಾಗಿರುವ ‘ಕಿಲಾಡಿ’ ಸಿನಿಮಾ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗಲಿದೆ. ಫೆ.11ರಂದು ಈ ಸಿನಿಮಾವನ್ನು ರಿಲೀಸ್​ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಭರ್ಜರಿಯಾಗಿ ಪ್ರಚಾರ ಮಾಡುತ್ತಿರುವ ಚಿತ್ರತಂಡಕ್ಕೆ ಈಗ ಈ ಲಿಪ್​ ಲಾಕ್​ ಫೋಟೋ ವರದಾನವಾಗಿದೆ.

Ad Widget . Ad Widget .

ಈ ಫೋಟೋದಲ್ಲಿ ಇರುವ ನಟಿ ಯಾರು ಎಂಬುದು ಬಹಿರಂಗ ಆಗಿಲ್ಲ. ಆ ಪ್ರಶ್ನೆಗೆ ಉತ್ತರ ತಿಳಿಯಬೇಕು ಎಂದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಬೇಕಾಗುವುದು ಅನಿವಾರ್ಯ. ‘ಕಿಲಾಡಿ’ ಎಂದು ಶೀರ್ಷಿಕೆಗೆ ತಕ್ಕಂತೆಯೇ ಚಿತ್ರತಂಡ ಪ್ರಚಾರ ಪಡೆಯುತ್ತಿದೆ. ಅಂದಹಾಗೆ, ಈ ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಬಿಸ್ನೆಸ್​ ಮಾಡಿದೆ. ಅದರಿಂದ ನಿರ್ಮಾಪಕರು ತುಂಬ ಖುಷಿ ಆಗಿದ್ದಾರೆ.

‘ಕಿಲಾಡಿ’ ಚಿತ್ರದ ವಿತರಣೆ ಹಕ್ಕುಗಳು ಭಾರಿ ಮೊತ್ತಕ್ಕೆ ಸೇಲ್​ ಆಗಿವೆ. ಒಟಿಟಿ, ಕಿರುತೆರೆ ಪ್ರಸಾರದ ಹಕ್ಕುಗಳ ವಿಚಾರದಲ್ಲಿಯೂ ದೊಡ್ಡ ಆಫರ್​ ಬಂದಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾದ ರಿಲೀಸ್​ಗೂ ಮುನ್ನವೇ ನಿರ್ಮಾಪಕರು ಲಾಭದಲ್ಲಿದ್ದಾರೆ. ಇದಕ್ಕೆ ಕಾರಣವಾದ ನಿರ್ದೇಶಕರಿಗೆ ಅವರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಉಡುಗೊರೆಯನ್ನು ನೀಡಿದ್ದಾರೆ. 1.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​ ಕಾರನ್ನು ನಿರ್ದೇಶಕ ರಮೇಶ್​ ವರ್ಮಾಗೆ ನಿರ್ಮಾಪಕರು ಕೊಟ್ಟಿದ್ದಾರೆ.

ನಿರ್ದೇಶಕರು ಕಾರನ್ನು ಉಡುಗೊರೆಯಾಗಿ ಪಡೆಯುತ್ತಿರುವ ಫೋಟೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ‘ಪುಷ್ಪ’ ಸಿನಿಮಾಗೆ ಸೂಪರ್​ ಹಿಟ್​ ಹಾಡುಗಳನ್ನು ನೀಡಿದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್​ ಅವರೇ ‘ಕಿಲಾಡಿ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ಹೈಪ್​ ಸೃಷ್ಟಿ ಆಗಿದೆ.

Leave a Comment

Your email address will not be published. Required fields are marked *