ಸಮಗ್ರ ನ್ಯೂಸ್ ಡೆಸ್ಕ್: ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಪ್ರವೇಶಾತಿ ಪಡೆಯುವಾಗ ಕಾಲೇಜಿನ ನಿಯಮಾವಳಿ ಪತ್ರಕ್ಕೆ ಮುಸ್ಲಿಂ ವಿದ್ಯಾರ್ಥಿನಿ ಸಹಿ ಹಾಕಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಳೇಜು ನಿಯಮಾವಳಿ ಪಾಲನೆಯ ತಿಳಿವಳಿಕೆ ಪತ್ರದಲ್ಲಿ ಸಮವಸ್ತ್ರ ಹಾಗೂ ಗುರುತಿನ ಚೀಟಿ ಧರಿಸಿ ಬರುವುದು ಕಡ್ಡಾಯ ಸೇರಿದಂತೆ 10 ನಿಯಮಗಳು ಇವೆ.
ವಿದ್ಯಾರ್ಥಿನಿ ರೇಷಮ್ ಎಂಬುವರು ಪತ್ರಕ್ಕೆ ಸಹಿ ಮಾಡಿದ್ದಾರೆ. ಈ ಪತ್ರ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಪ್ರವೇಶಾತಿ ಪಡೆಯುವಾಗ ಸಮವಸ್ತ್ರ ನಿಯಮವನ್ನು ಒಪ್ಪಿ ಈಗ ಹಿಜಾಬ್‌ಗೆ ಅನುಮತಿ ಕೇಳುತ್ತಿರುವುದು ಎಷ್ಟು ಸರಿ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಪತ್ರದ ಬಗ್ಗೆ ಕಾಲೇಜು ಅಭಿವೃದ್ಧಿ ಸಮಿತಿಯಾಗಲಿ, ಪ್ರಾಂಶುಪಾಲರಾಗಲಿ ಪ್ರತಿಕ್ರಿಯೆ ನೀಡಿಲ್ಲ.