ಇನ್ನುಮುಂದೆ ಪೊಲೀಸರು ರಸ್ತೆಯಲ್ಲಿ ವಾಹನಗಳಿಗೆ ಅಡ್ಡ ಹಾಕಲ್ಲ ! ಆದರೇ…? ಮುಂದೆ ಓದಿ
ಸಮಗ್ರ ನ್ಯೂಸ್ ಡೆಸ್ಕ್: ಇನ್ಮುಂದೆ ಪೊಲೀಸರು ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಅಡ್ಡ ಹಾಕುವುದಿಲ್ಲ. ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಚಾಲಕ ಮತ್ತು ಸವಾರರಿಂದ ದಂಡ ವಸೂಲಿ ಮಾಡಲು ಸಂಚಾರ ಪೊಲೀಸರು ರಸ್ತೆಗಳ ಬದಲು ಇನ್ಮುಂದೆ ಆರ್ಟಿಒ ಕಚೇರಿ ಮುಂದೆ ಕಾರ್ಯಾಚರಣೆ ನಡೆಸಲಿದ್ದಾರೆ.
ರಸ್ತೆಗಳಲ್ಲಿ ವಾಹನಗಳನ್ನು ತಡೆದು ಹಳೇ ಪ್ರಕರಣಗಳ ಪರಿಶೀಲನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಈ ಹೊಸ ಮಾದರಿ ಅಳವಡಿಕೆಗೆ ಪೊಲೀಸ್ ಇಲಾಖೆ ತೀರ್ಮಾನಿಸಿದೆ.
ಪ್ರತಿ ಆರ್ಟಿಒ ಕಚೇರಿ ಮುಂದೆ ಎಸ್ಐ, ಎಎಸ್ಐ ಹಾಜರಾಗಿ ಡಿಎಲ್, ಫಿಟ್ನೆಸ್ ಸರ್ಟಿಫಿಕೇಟ್, ವಾಹನ ನೋಂದಣಿ, ಡಿಎಲ್ ನವೀಕೃತ ಸೇರಿ ಇತರ ಕೆಲಸಕ್ಕೆ ಬರುವ ವಾಹನ ಸವಾರರ ಮತ್ತು ಚಾಲಕರು ಪಾವತಿಸಬೇಕಿರುವ ದಂಡವನ್ನು ವಸೂಲಿ ಮಾಡುವ ಯೋಜನೆ ರೂಪಿಸಿದ್ದಾರೆ.