ಸಮಗ್ರ ನ್ಯೂಸ್ ಡೆಸ್ಕ್: ಉತ್ತರ ಭಾರತ ಮೂಲದ ಕ್ಷೌರಿಕ ನೋರ್ವ ಚಪ್ಪಲಿ ಧರಿಸಿ ಗುಳಿಗಜ್ಜನ ಕಟ್ಟೆ ಮುಂದೆ ತ್ರಿಶೂಲ ಹಿಡಿದು ನಿಂತ ಸ್ಟೇಟಸ್ ಹಾಕಿದ್ದು ಕೊಣಾಜೆ ಪೊಲೀಸರು ಆತನ ವಶಕ್ಕೆ ಪಡೆದಿದ್ದಾರೆ. ಈ ನಡುವೆ ಸ್ಥಳೀಯನೋರ್ವ ಹಿಂದೂ ಸಂಘಟನೆ ಕಾರ್ಯಕರ್ತ ಎಂದು ಹೇಳಿ ಆರೋಪಿಯನ್ನು ಬ್ಲಾಕ್ ಮೇಲ್ ಮಾಡಿ ಹಣ ಪೀಕಿಸಲು ಯತ್ನ ನಡೆಸಿದ್ದಾನೆಂದು ಹೇಳಲಾಗಿದೆ
ಅಸೈಗೋಳಿಯ ಸಲೂನ್ ಒಂದರಲ್ಲಿ ಕ್ಷೌರಿಕನಾಗಿರುವ ಉತ್ತರ ಭಾರತ ಮೂಲದ ಆದಿಲ್ ಆಯನ್ ಖಾನ್ ಎಂಬಾತನೆ ದೈವದ ತ್ರಿಶೂಲ ಹಿಡಿದು ವಿಕೃತಿ ಮೆರೆದ ಆರೋಪಿ. ಆಯಾನ್ ಖಾನ್ ಮುಡಿಪುವಿನ ಕಂಬಳ ಪದವಿನ ಮುಚ್ಚಿರ ಕಲ್ಲು ಎಂಬಲ್ಲಿನ ಗುಳಿಗಜ್ಜನ ಕಟ್ಟೆಯ ಎದುರು ನಿಂತು ಚಪ್ಪಲಿ ಧರಿಸಿ ದೈವದ ತ್ರಿಶೂಲವನ್ನ ಹಿಡಿದು ನಿಂತ ಪೊಟೊವನ್ನ ತನ್ನ ಮೊಬೈಲ್ಲಿ ಸ್ಟೇಟಸ್ ಹಾಕಿದ್ದನೆನ್ನಲಾಗಿದೆ.
ಆರೋಪಿ ಈ ಕುಕೃತ್ಯವನ್ನ ಒಂದು ತಿಂಗಳ ಹಿಂದೆ ಎಸಗಿದ್ದನೆನ್ನಲಾಗಿದೆ. ಇದೀಗ ಆತ ದೈವಕ್ಕೆ ಅಪಚಾರ ಎಸಗಿದ ಸ್ಟೇಟಸ್ ಪೋಟೊ ವೈರಲ್ ಆಗಿದ್ದು ಕೊಣಾಜೆ ಪೊಲೀಸರು ಆರೋಪಿ ಆಯಾನ್ ಖಾನ್ ನನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಮಧ್ಯೆ ಅಸೈಗೋಳಿಯ ಸ್ಥಳೀಯ ಯುವಕನೋರ್ವ ತಾನು ಹಿಂದೂ ಸಂಘಟನೆ ಮುಖಂಡನೆಂದು ಹೇಳಿ ದೈವ ನಿಂದನೆಯ ಪೋಟೋ ಸ್ಟೇಟಸ್ ಮುಂದಿಟ್ಟು ಕ್ಷೌರಿಕ ಆಯಾನ್ ನನ್ನ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದು ಈ ಬಗ್ಗೆ ಆಯಾನ್ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾಗಿ ತಿಳಿದು ಬಂದಿದೆ.