ಸಮಗ್ರ ನ್ಯೂಸ್ ಡೆಸ್ಕ್: ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ವಾಣಿಜ್ಯ ಎಲ್‌ಪಿಜಿ ಅಡುಗೆ ಅನಿಲ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 91.50 ರೂ. ಇಳಿಕೆ ಮಾಡಲಾಗಿದೆ.
19.2 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವು 91.50 ರೂ. ಇಳಿಸಲಾಗಿದೆ. ದರ ಇಳಿಕೆಯಿಂದಾಗಿ ಎಲ್‌ಪಿಜಿ ಬಳಕೆಯ ಸಿಲಿಂಡರ್ ಬೆಲೆ 1,907ಕ್ಕೆ ಬಂದಿದೆ.
ಕೆಲ ತಿಂಗಳುಗಳಿಂದ ಎಲ್‌ಪಿಜಿ ದಲ ಏರಿಕೆ ಕಾಣುತ್ತಲೇ ಇತ್ತು. ಇದಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಪಂಚ ರಾಜ್ಯಗಳ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲೇ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆ ಮಾಡಲಾಗಿದೆ.
ಇದರ ಮಧ್ಯೆ ವಿಮಾನ ಇಂಧನದ ಬೆಲೆಯನ್ನು ಏರಿಕೆ ಮಾಡಲಾಗಿದೆ. ವಿಮಾನದ ಇಂಧನದ ಬೆಲೆಯಲ್ಲಿ ಶೇ.8.5 ಏರಿಕೆಯಾಗಿದೆ. ವಿಮಾನ ಪ್ರಯಾಣಿಕರಿಗೆ ಪ್ರಯಾಣದ ಬಿಸಿ ತಟ್ಟಿದೆ.