ಸಮಗ್ರ ನ್ಯೂಸ್ ಡೆಸ್ಕ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಫೆ.1ರ ಬೆಳಿಗ್ಗೆ 11 ಗಂಟೆಗೆ 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದ ನಲುಗಿದ್ದ ದೇಶದ ಆರ್ಥಿಕತೆ, ಕೃಷಿ ವಲಯ, ಉದ್ಯೋಗ ವಲಯ ಸೇರಿದಂತೆ ನಾನಾ ವರ್ಗಗಳಿಗೆ ಬಜೆಟ್ ಮೇಲೆ ಸಾಕಷ್ಟುನಿರೀಕ್ಷೆಯಿದೆ.
ಇನ್ನು ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಜ.31 ರಂದು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷಾ ವರದಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ.
ಕೇಂದ್ರ ಬಜೆಟ್ ನೇರಪ್ರಸಾರ ಇಲ್ಲಿ ವೀಕ್ಷಿಸಿ… ಕೃಪೆ: ಸಂಸತ್ ಟಿವಿ
ಆರ್ಥಿಕ ಸಮೀಕ್ಷೆ 2021-2ರಲ್ಲಿ ಹಲವು ವಿಚಾರಗಳು ಗಮನಸೆಳೆದಿವೆ. ವಿಶೇಷವಾಗಿ, ದೇಶದ ಅರ್ಥವ್ಯವಸ್ಥೆ ಮೇಲೆ ಹೆಚ್ಚಿನ ಪರಿಣಾಮ ಬೀರುವಂಥ ಕಚ್ಚಾತೈಲದರ ಪ್ರಸ್ತುತ ಪ್ರತಿಬ್ಯಾರೆಲ್ ಗೆ 90 ಡಾಲರ್ ಇದ್ದು, ಮುನ್ನೋಟದ ಬೆಲೆ 70ರಿಂದ 75 ಡಾಲರ್ ನಮೂದಾಗಿದೆ. ಅದೇ ರೀತಿ, ಎಲ್ಲ ಕ್ಷೇತ್ರಗಳಲ್ಲಿ ಖಾಸಗಿ ಪಾಲುದಾರಿಕೆಗೆ ಉತ್ತೇಜನ ನೀಡುವ ಕೆಲಸ ಮುಂದುವರೆದಿದೆ.
ಏರ್ ಇಂಡಿಯಾ ಖಾಸಗೀಕರಣವು ಈ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಿದೆ. ಜಗತ್ತಿನ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ವಿದೇಶ ವಿನಿಮಯ ಮೀಸಲು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶ 9.2% ಜಿಡಿಪಿ ಬೆಳವಣಿಗೆ ದರ ದಾಖಲಿಸಬಹುದು ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡುವ ನಿರೀಕ್ಷೆ ಇದೆ. ದೇಶದ ಆರ್ಥಿಕತೆಯ ಸ್ಥಿತಿಗತಿ, ಮುನ್ನೋಟ, ನೀತಿ ನಿರೂಪಣೆಯಲ್ಲಿನ ಸಂಭಾವ್ಯ ಬದಲಾವಣೆಗಳನ್ನು ಆರ್ಥಿಕ ಸಮೀಕ್ಷಾ ವರದಿ ಒಳಗೊಂಡಿರುತ್ತದೆ.