ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಾಕಷ್ಟು ಜನ ಆಸ್ಪತ್ರೆಗೆ ತೆರಳದೇ ಮನೆಯಲ್ಲಿಯೇ ಕೊರೊನಾ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮನೆಯಲ್ಲಿಯೇ ಕೊರೊನಾ ಮನೆ ಪರೀಕ್ಷೆಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಈ ಮಾಹಿತಿಯನ್ನ ಟ್ವಿಟ್ ಮೂಲಕ ಹಂಚಿಕೊಂಡಿದ್ದಾರೆ. ಕೋವಿಡ್ ಮನೆ ಪರೀಕ್ಷೆಗೆ ಹೊಸ ಮಾರ್ಗಸೂಚಿಗಳನ್ವಯ ಪರೀಕ್ಷೆಯು ಕೋವಿಡ್ ಪಾಸಿಟಿವ್ ತೋರಿಸಿದರೆ ಈ ಕೆಳಗಿನ ಲಿಂಕ್ ಮೂಲಕ ನವೀಕರಿಸಿಕೊಳ್ಳಬಹುದು. https://cvstatus.icmr.gov.in.
ಒಂದು ವೇಳೆ ನೆಗೆಟಿವ್ ವರದಿ ಬಂದಿದ್ದು, ಕೋವಿಡ್ ರೋಗಲಕ್ಷಣಗಳನ್ನ ಹೊಂದಿದ್ದರೆ, ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ.
ಇನ್ನು ಪರೀಕ್ಷೆಯು ನಕಾರಾತ್ಮಕವಾಗಿದ್ದರೆ ಮತ್ತು ಯಾವುದೇ ರೋಗಲಕ್ಷಣ ಇಲ್ಲದಿದ್ದರೆ, ಯಾವುದೇ ಕ್ರಿಯೆಯ ಅಗತ್ಯವಿಲ್ಲ ಎಂದಿದ್ದಾರೆ.