ಬೆಳ್ತಂಗಡಿ: ಮೇ17: ತೌಕ್ತೆ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಿರುವಾಗಲೇ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯಲ್ಲಿನ ಫಲ್ಗುಣಿ ನದಿ ಸಂಪರ್ಕಿಸುವ ಹಳ್ಳದಲ್ಲಿ ನೀರು ನಾಯಿಗಳು ಕಂಡು ಬಂದು ಅಚ್ಚರಿ ಮೂಡಿಸಿವೆ.
ನೀರು ನಾಯಿಗಳು ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಇವುಗಳು ಇಲ್ಲಿ ಕಾಣಿಸಿಕೊಂಡಿರೋದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿವೆ.
ನೀಳ ದೇಹ, ನೀರಿನಲ್ಲಿ ತೋಯ್ದ ತುಪ್ಪಳದ ಚರ್ಮ,ಚಪ್ಪಟೆಯಾದ ತಲೆ, ಬಲವಾದ ಬಾಲ, ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲು ಹೊಂದಿರುವ ನೀರುನಾಯಿಯ ಮುಖ್ಯವಾಗಿ ನದಿಗಳ ಸಮೀಪ ಬಂಡೆಗಳ ಪೊಟರೆಗಳಲ್ಲಿ ವಾಸಿಸುತ್ತವೆ. ಇವು ಭಾರತದಲ್ಲಿ ಕಾಶ್ಮೀರ,ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಇದು ವ್ಯಾಪಕವಾಗಿದೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 👇https://youtube.com/shorts/hro1HZW1Lv0?feature=share
ಮೀನು,ಏಡಿ,ಕಪ್ಪೆ,ಬಾತುಕೋಳಿ,ನೀರುಕೋಳಿ ಹಾಗೂ ಕೆಲವೊಮ್ಮೆ ಎಲೆಗಳನ್ನು ತಿಂದು ಬದುಕುವ ಇವುಗಳ ಗರ್ಭಧಾರಣಾ ಅವದಿ ಸುಮಾರು 90 ದಿನಗಳು ಎಂದು ತಜ್ಞರು ಹೇಳುತ್ತಾರೆ.