Ad Widget .

ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಸಿಹಿಯಲ್ಲ, ಮೂಗಿಗೆ ಸವರಿದ ತುಪ್ಪ| ಆಕ್ರೋಶ ವ್ಯಕ್ತಪಡಿಸಿದ ಉಪನ್ಯಾಸಕರು|

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿ ಕೊಟ್ಟಿದ್ದೇವೆ ಎಂದು ಹೇಳಿರುವ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರ ಹೇಳಿಕೆ ಶುದ್ಧ ಸುಳ್ಳು, ಇದು ಮೂಗಿಗೆ ತುಪ್ಪ ಸವರುವ ತಂತ್ರವಾಗಿದೆ ಎಂದು ಅತಿಥಿ ಉಪನ್ಯಾಸಕರು ಆಕ್ರೋಶ ಹೊರಹಾಕಿದ್ದಾರೆ.

Ad Widget . Ad Widget . Ad Widget .

ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರು, ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು ಸಹಾಯ ಧನವನ್ನ ಅತಿಥಿ ಉಪನ್ಯಾಸಕರಿಗೆ ನೀಡ್ತಿದ್ದೇವೆ ಎಂದು ಸರ್ಕಾರ ಹೇಳಿರುವುದು ಶುದ್ಧ ಸುಳ್ಳು. ಟೆಕ್ನಿಕಲಿ ಯೋಚನೆ ಮಾಡಿದರೆ ಒಬ್ಬರಿಗೆ 3 ಸಾವಿರ ಮಾತ್ರ ಹೆಚ್ಚು ಮಾಡಿದ್ದಾರೆ. ಆದರೆ, 30, 32 ಸಾವಿರ ಕೊಡುತ್ತೇವೆ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವುದು ಶುದ್ಧ ಸುಳ್ಳು ಎಂದು ಆರೋಪಿಸಿದ್ದಾರೆ.

ಇನ್ನು ಸರ್ಕಾರದ ತೀರ್ಮಾನದಲ್ಲಿ ಉದ್ಯೋಗ ಭದ್ರತೆ ಇಲ್ಲ. ಇದೊಂದು ಒಡೆದು ಆಳುವ ನೀತಿ. ಯಾರೂ ಕೂಡ ಧೃತಿಗೆಡೋದು ಬೇಡ. ನಮ್ಮ ಹೋರಾಟ ಮುಂದುವರೆಯುತ್ತದೆ. 14 ಸಾವಿರ ಮಂದಿಗೂ ನ್ಯಾಯ ದೊರೆಯುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ಪ್ರತಿಭಟನಾ ನಿರತ ಅಥಿತಿ ಉಪನ್ಯಾಸಕರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಮೂಲ ಬೇಡಿಕೆಯನ್ನೇ ಬಿಟ್ಟು ಸಂಬಳವನ್ನ ಮಾತ್ರ ಹೆಚ್ಚಿಗೆ ಮಾಡಿರೋದು ಬೇಸರದ ಸಂಗತಿ. ಆದರೆ ಅತಿಥಿ ಉಪನ್ಯಾಸಕರಿಗೆ ಬೇಕಿರೋದು ಸಂಬಳ ಅಲ್ಲ. ಸೇವಾ ಭದ್ರತೆ ಬೇಕು. ಖಾಯಂ ಹಾಗೂ ಹೆಚ್ಚುವರಿ ಉಪನ್ಯಾಸಕರು ಬಂದಾಗ ನಮ್ಮ ವೃತ್ತಿಯನ್ನೇ ತೊರೆಯಬೇಕಿದೆ, ಈ ಕ್ರಮ ಸರಿ ಇಲ್ಲ. ಈ ಹಿಂದಿನಿಂದಲೂ ಸೇವಾ ಅಭದ್ರತೆ ಕಾಡ್ತಿತ್ತು. ಸೇವಾ ಭದ್ರತೆಗಾಗಿ ನಾವು ಹೋರಾಟ ಕೈಗೊಂಡಿದ್ದೇವೆ. ನಮ್ಮ ಮೂಲ ಬೇಡಿಕೆಯನ್ನೇ ಈಡೇರಿಸದೇ ಸರ್ಕಾರ ಕೈ ಚೆಲ್ಲಿದ್ದಾರೆ. ಇದು ನಿರಾಶಾದಾಯಕವಾದ ಕ್ರಮ. ನಮ್ಮ ಮೂಲ ಬೇಡಿಕೆ ಈಡೇರೋವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

Leave a Comment

Your email address will not be published. Required fields are marked *