ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಕೊರೋನಾ ಕೇಸ್ ಗಳಿಂದಾಗಿ ಮತ್ತೆ ಲಾಕ್ ಡೌನ್ ಆಗಲಿದೆ ಎನ್ನಲಾಗುತ್ತಿದ್ದು, ಆದರೆ ಲಾಕ್ ಡೌನ್ ಪ್ರಶ್ನೆ ಉದ್ಭವಿಸಲ್ಲ ಎಂದು ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಜನರು ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ. ಮಾಸ್ಕ್, ಸಾಮಾಜಿಕ ಅಂತರದಂತ ನಿಯಮ ಪಾಲಿಸಿ. ಸದ್ಯದ ಈಗಿನ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವಂತ ಕೋವಿಡ್ ಸೋಂಕಿತರ ಪ್ರಮಾಣ ಗಮನಿಸಿದರೆ ಲಾಕ್ ಡೌನ್ ಮಾಡಿ ಕೊರೋನಾ ನಿಯಂತ್ರಣ ಮಾಡೋ ಪ್ರಮೇಯವಿಲ್ಲ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಲಾಕ್ ಡೌನ್ ಇಲ್ಲವೇ ಇಲ್ಲ ಎಂಬುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕಿನ ಪ್ರಮಾಣ ಫೆಬ್ರವರಿ ತಿಂಗಳಿನಲ್ಲಿ ಪೀಕ್ ಹಂತಕ್ಕೆ ತಲುಪಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಫೀಕ್ ಹಂತಕ್ಕೆ ತಲುಪಿದ ಬಳಿಕ 3-4 ವಾರಗಳಲ್ಲೇ ಕಡಿಮೆ ಆಗಲಿದೆ ಅಂತಾನೂ ತಿಳಿಸಿದ್ದಾರೆ. ಹೀಗಾಗಿ ಜನರು ಕೊರೋನಾ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದರು.