ಮಂಗಳೂರು: ಸ್ಕೂಟರ್ ಮತ್ತು ಬಸ್ ನಡುವೆ ಸಂಭವಿಸಬಹುದಾದ ಭೀಕರ ಅಪಘಾತವೊಂದು ಕೂದಳೆಲೆ ಅಂತರದಲ್ಲಿ ತಪ್ಪಿದ ಘಟನೆ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಪಘಾತದಿಂದ ಬಚಾವ್ ಆದ ಬೈಕ್ ಸವಾರನನ್ನು ಮಲಾರ್ ನಿವಾಸಿ ಎಂದು ಗುರುತಿಸಲಾಗಿದ್ದು, ಈತ ಮಂಗಳೂರಿನಿಂದ ಎಲ್ಯಾರ್ ಪದವು ಮಾರ್ಗವಾಗಿ ಮಲಾರ್ ಗೆ ತನ್ನ ಸ್ಕೂಟರ್ ನಲ್ಲಿ ಹೋಗುತ್ತಿದ್ದ. ಎಲ್ಯಾರ್ ಶಾಲೆ ಬಳಿ ವೇಗವಾಗಿ ಹೋಗುತ್ತಿದ್ದಾಗ ಸಿಟಿ ಬಸ್ಸೊಂದು ಕ್ರಾಸ್ ಮಾಡೋದಕ್ಕೆ ಚಾಲಕ ಮುಂದಾಗಿದ್ದು ಬಸ್ ಮುಂದಕ್ಕೆ ಬಂದಿದೆ.
ಇದೇ ವೇಳೆ ವೇಗವಾಗಿ ಬಂದ ಸ್ಕೂಟರ್ ಸವಾರನ ಚಾಕಚಕ್ಯತೆಯಿಂದಾಗಿ ಕೂದಳೆಲೆ ಅಂತರದಲ್ಲಿ ಬಸ್ ಗೆ ಡಿಕ್ಕಿ ಹೊಡೆಯುವುದು ತಪ್ಪಿದೆ.ಅಲ್ಲಿಂದ ಮುಂದೆ ಹೋದ ಸ್ಕೂಟರ್ ಚಾಲಕನ ನಿಯಂತ್ರಣ ಸಿಗದೆ ಮೀನಿನ ಕಾರ್ಖಾನೆಗೆ ತಾಗಿಕೊಂಡಿದ್ದ ಅಂಗಡಿ ಮತ್ತು ರಸ್ತೆಬದಿಯಿದ್ದ ಮರದ ನಡುವಿನಿಂದಲೇ ಸಾಗಿದೆ.
ಅತೀ ಸಣ್ಣ ಜಾಗದಲ್ಲೇ ಸ್ಕೂಟರ್ ನ್ನು ನುಗ್ಗಿಸಿ ಸವಾರ ತನ್ನ ಜೀವ ಉಳಿಸಿಕೊಂಡಿದ್ದಾನೆ. ಈ ಅದೃಷ್ಟದಾಟದಲ್ಲಿ ಸ್ಕೂಟರ್ ಸವಾರ ಎರಡು ಕಡೆ ಅಪಘಾತದಿಂದ ಪಾರಾಗಿದ್ದಾನೆ.