Ad Widget .

ಸೆಕ್ಸ್ ಗಾಗಿ ಪತ್ನಿಯರ ಎಕ್ಸ್ ಚೇಂಜ್| ದೇವರ ನಾಡಲ್ಲೊಂದು ಅನಾಗರಿಕ ದಂಧೆ| ಟೆಲಿಗ್ರಾಂ, ಮೆಸೇಂಜರ್ ನಲ್ಲಿ ನಡೆಯುತ್ತೆ ವ್ಯವಹಾರ|

ತಿರುವನಂತಪುರಂ: ಸೆಕ್ಸ್​ಗಾಗಿ ಪತ್ನಿಯರನ್ನೇ ವಿನಿಮಯ ಮಾಡಿಕೊಳ್ಳುವ ದಂಧೆ ನಡೆಸುತ್ತಾ ದಾಂಪತ್ಯ ಬದುಕಿಗೆ ಕೊಳ್ಳಿ ಇಡುತ್ತಿರುವ ವಿಚಿತ್ರ ದಂಧೆಯೊಂದು ಕೇರಳದಲ್ಲಿ ನಡೆಯುತ್ತಿದೆ.

Ad Widget . Ad Widget .

ಇಂತದ್ದೊಂದು ಅನಾಗರಿಕ ವ್ಯವಹಾರಕ್ಕಾಗಿ ಈ ನೀಚ ಕಾಮುಕರು ಟೆಲಿಗ್ರಾಂ, ಮೆಸೆಂಜರ್​ನಲ್ಲಿ ಗ್ರೂಪ್​ ರಚಿಸಿಕೊಂಡು ‘ಪತ್ನಿಯರ ವಿನಿಮಯ’ ದಂಧೆ ನಡೆಸುತ್ತಾ ಕೇರಳದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Ad Widget . Ad Widget .

ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ್​ನಲ್ಲಿ ಹಣ ಮತ್ತು ಸೆಕ್ಸ್​ಗಾಗಿ ತಮ್ಮ ಪತ್ನಿಯರನ್ನು ವಿನಿಮಯ ಮಾಡಿಕೊಳ್ಳಲೆಂದೇ ದುಷ್ಕರ್ಮಿಗಳು ಟೆಲಿಗ್ರಾಂ, ಮೆಸೆಂಜರ್ ಗ್ರೂಪ್​ ರಚನೆ ಮಾಡಿಕೊಂಡಿದ್ದರು. ಕೇರಳದ ಮೂರು ಜಿಲ್ಲೆಯ 1 ಸಾವಿರಕ್ಕೂ ಹೆಚ್ಚು ಜನ ಈ ಗ್ರೂಪ್​ಗಳಲ್ಲಿ ಸದಸ್ಯರಾಗಿದ್ದರು. ಇನ್ನು ವೈಫ್​ ಎಕ್ಸ್​ಚೇಂಜ್​ ಗ್ರೂಪಿನಲ್ಲಿ ಬಹುತೇಕ ಶ್ರೀಮಂತ ಕುಟುಂಬಸ್ಥರೇ ಇದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಹಣ ಉಳ್ಳವರು ತಮಗಿಷ್ಟ ಬಂದಾಕೆಯನ್ನ ಗ್ರೂಪಿನಲ್ಲೇ ಆಯ್ಕೆ ಮಾಡುತ್ತಿದ್ದರು. ಅತ್ತ ಹಣಕ್ಕಾಗಿ ಪರಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತೆ ತನ್ನ ಪತ್ನಿಯನ್ನು ಕಳುಹಿಸುತ್ತಿದ್ದರು.

ಇದೇ ಗ್ರೂಪಿನ ಸದಸ್ಯನೊಬ್ಬ ತನ್ನ ಪತ್ನಿಯನ್ನು ಮೂವರು ಗಂಡಸರ ಜತೆ ಕಳುಹಿಸಿದ್ದ ಎಂಬ ಆಘಾತಕಾರಿ ವಿಚಾರವೂ ಬಯಲಾಗಿದೆ. ಉಪಯೋಗಿಸಿ ಬಿಸಾಡುವ ವಸ್ತುವಂತೆ ಕಾಮುಕರು ಮಹಿಳೆಯರನ್ನ ಬಳಸಿಕೊಳ್ಳುತ್ತಿದ್ದ ದಂಧೆಗೆ ಸಂತ್ರಸ್ತೆಯರ ಗಂಡಂದಿರೇ ದಲ್ಲಾಳಿಗಳಾಗಿದ್ದರು ಎಂಬ ವಿಚಾರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ಈ ಬಗ್ಗೆ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ಬಯಲಾಗಿದ್ದು, ಕೇರಳ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಪತ್ನಿಯರ ವಿನಿಮಯ ಜಾಲದ ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave a Comment

Your email address will not be published. Required fields are marked *