ಕಿನ್ನಿಗೋಳಿ: ಉಡುಪಿ, ಚಿಕ್ಕಮಗಳೂರಿನ ಕಾಲೇಜುಗಳಲ್ಲಿ ಸ್ಕಾರ್ಫ್-ಕೇಸರಿ ಶಲ್ಯ ವಿವಾದಗಳು ಹಸಿಯಾಗಿರುವಾಗಲೇ, ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ಪೊಂಪೈ ಕಾಲೇಜಿನಲ್ಲಿ ಸ್ಕಾರ್ಪ್ ವಿವಾದ ಪ್ರಾರಂಭವಾಗಿದೆ.
ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಗಳು ಸ್ಕಾರ್ಪ್ ಹಾಕಿ ತರಗತಿ ಹಾಜರಾದ ಕಾರಣ, ಹಿಂದೂ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿ ತರಗತಿ ಹಾಜರಾಗಿದ್ದಾರೆ.
ವಿದ್ಯಾರ್ಥಿಗಳು ಸ್ಕಾರ್ಪ್ ವಿಚಾರ ಕುರಿತು ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಆಡಳಿತ ಮಂಡಳಿ ಸಭೆ ನಡೆದಿದೆ ಎನ್ನಲಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಪ್ ತೆಗೆಯುವ ತನಕ ನಾವು ಕೇಸರಿ ಶಾಲು ತೆಗೆಯುವುದಿಲ್ಲ. ನಮಗೆ ಹಿಂದು ಸಂಘಟನೆಗಳಾದ ಬಜರಂಗದಳ, ವಿಶ್ವಹಿಂದೂಪರಿಷತ್, ಎಬಿವಿಪಿ ಬೆಂಬಲ ಸೂಚಿಸಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿ ಜ.10ರಂದು ಕಾಲೇಜಿಗೆ ರಜೆ ನೀಡಿ ಪೋಷಕರ ಸಭೆ ನಡೆಸಲಾಗುವುದು. ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರ ಸಭೆಯಲ್ಲಿ ಸಮವಸ್ತ್ರದ ಕುರಿತು ಮಾತನಾಡಲಾಗುವುದು ಎಂದು ಪ್ರಾಂಶುಪಾಲರು ಹೇಳಿದ್ದಾರೆ.