ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ನಡೆದಿದ್ದ ಪ್ರತಿಭಟನೆ ಮತ್ತು ಲಾಠಿಚಾರ್ಜ್ ವೇಳೆ ದಾಖಲಾದ ಕೇಸ್ ಗಳಲ್ಲಿ ಬಂಧಿತರಾದ 10 ಮಂದಿ ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಕೋರ್ಟ್ ಜಾಮೀನು ನೀಡಿದೆ.
ಮೊಹಮ್ಮದ್ ತ್ವಾಹಿರ್, ಸಾಧಿಕ್, ಅಬ್ದುಲ್ ಮುಬಾರಕ್, ಅಬ್ದುಲ್, ಮೊಹಮ್ಮದ್ ಜಾಹಿದ್, ಸ್ವಾಜೀರ್ ಮೊಹಮ್ಮದ್ ಫೈಝಲ್, ಮೊಹಮ್ಮದ್ ಹನೀಫ್, ಎನ್. ಕಾಸಿಂ, ಮೊಹಮ್ಮದ್ ಆಶೀಫ್, ತೌಫೀಲ್ ಮೊಹಮ್ಮದ್, ಜಾಮೀನು ಪಡೆದುಕೊಂಡವರು.
ಡಿಸೆಂಬರ್ 14ರಂದು ಉಪ್ಪಿನಂಗಡಿ ಠಾಣಾ ಮುಂಭಾಗದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿಚಾರ್ಜ್ ನಡೆಸಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ 10 ಮಂದಿಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಹೀಗೆ ಡಿಸೆಂಬರ್ 14 ಮತ್ತು 15ರಂದು ಉಪ್ಪಿನಂಗಡಿ ಪೊಲೀಸರು ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇಂದು ಕೋರ್ಟ್ ಜಾಮೀನು ನೀಡಿದೆ.