Ad Widget .

ಕರ್ನಾಟಕದಲ್ಲಿ ವೇಗ ಪಡೆದ ಕೊರೊನಾ ಅಲೆ| ಸೋಂಕು ‌ ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆ|

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಂಗಳೂರು: ದೇಶದ ಎಲ್ಲಾ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಸೋಂಕು ವೇಗವಾಗಿ ಹರಡಲಾರಂಭಿಸಿದೆ. ಭಾನುವಾರ 1,187 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 10,292ರಷ್ಟಾಗಿವೆ. ಬೆಂಗಳೂರು ನಗರವೊಂದರಲ್ಲೇ 8671 ದಾಖಲಾಗಿವೆ. ಹೊಸದಾಗಿ ಆರು ಸಾವುಗಳಾಗಿದ್ದು, ಅದರಲ್ಲಿ ಬೆಂಗಳೂರು ನಗರದಲ್ಲಿ ಮೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ತುಮಕೂರಿನಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.

Ad Widget . Ad Widget . Ad Widget .

ಹೊಸ ಸೋಂಕಿನ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 923, ದಕ್ಷಿಣ ಕನ್ನಡ ದಲ್ಲಿ 63, ಉಡುಪಿಯಲ್ಲಿ 54, ಮೈಸೂರಿ ನಲ್ಲಿ 20, ಬೆಳಗಾವಿಯಲ್ಲಿ 12, ತುಮಕೂರು, ಕೊಡಗು, ಮಂಡ್ಯ ಜಿಲ್ಲೆಯಲ್ಲಿ ತಲಾ 10 ಪ್ರಕರಣಗಳು ವರದಿಯಾಗಿವೆ. ಹಲವು ತಿಂಗಳಿಂದಲೂ ಶೇ.1ರ ಒಳಗೆ ನಿಯಂತ್ರಣ ದಲ್ಲಿದ್ದ ಸೋಂಕು, ನಿನ್ನೆ ಶೇ.1.08ರಷ್ಟಾಗಿದೆ. ಸಾವಿನ ಪ್ರಮಾಣವೂ ಶೇ.0.5ರಷ್ಟಾಗಿದೆ.

ಹೊಸ ಸೋಂಕಿನ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 923, ದಕ್ಷಿಣ ಕನ್ನಡ ದಲ್ಲಿ 63, ಉಡುಪಿಯಲ್ಲಿ 54, ಮೈಸೂರಿ ನಲ್ಲಿ 20, ಬೆಳಗಾವಿಯಲ್ಲಿ 12, ತುಮಕೂರು, ಕೊಡಗು, ಮಂಡ್ಯ ಜಿಲ್ಲೆಯಲ್ಲಿ ತಲಾ 10 ಪ್ರಕರಣಗಳು ವರದಿಯಾಗಿವೆ. ಹಲವು ತಿಂಗಳಿಂದಲೂ ಶೇ.1ರ ಒಳಗೆ ನಿಯಂತ್ರಣ ದಲ್ಲಿದ್ದ ಸೋಂಕು, ನಿನ್ನೆ ಶೇ.1.08ರಷ್ಟಾಗಿದೆ. ಸಾವಿನ ಪ್ರಮಾಣವೂ ಶೇ.0.5ರಷ್ಟಾಗಿದೆ.

ಎರಡನೇ ಅಲೆಯಲ್ಲಿ ಭಾರೀ ಸಾವು-ನೋವು ಅನುಭವಿಸಿದ್ದ ಮಹಾರಾಷ್ಟ್ರದಲ್ಲಿ ಭಾನುವಾರ 11,877 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಶನಿವಾರಕ್ಕಿಂತಲೂ ಶೇ.29ರಷ್ಟು ಹೆಚ್ಚಿನದಾಗಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 42,024ಕ್ಕೆ ಏರಿಕೆಯಾಗಿತ್ತು.

ಮುಂಬೈನಲ್ಲಿ 29,819 ಪ್ರಕರಣಗಳಿದ್ದವು. ಡಿಸೆಂಬರ್ 20ರಲ್ಲಿ 2,061ರಷ್ಟಿದ್ದ ಸಕ್ರಿಯ ಪ್ರಕರಣಗಳು ಏಕಾಏಕಿ ಶೇ.1300ಕ್ಕೆ ಏರಿಕೆ ಯಾಗಿವೆ. ಭಾನುವಾರ ಮುಂಬೈನಲ್ಲಿ 503 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರಲ್ಲಿ 56 ಮಂದಿ ಆಮ್ಲಜನಕದ ನೆರವಿನಲ್ಲಿ ಉಸಿರಾಡುತ್ತಿದ್ದಾರೆ. ಶನಿವಾರ 389, ಶುಕ್ರವಾರ 497 ಮಂದಿ ಆಸ್ಪತ್ರೆ ದಾಖಲಾಗಿದ್ದರು.

ದೆಹಲಿಯಲ್ಲೂ ಕೊರೊನಾ ಸೋಂಕಿನ ಪ್ರಮಾಣ ಏರಿಕೆ ಕಾಣುತ್ತಿದ್ದು,ಶನಿವಾರ 3,194 ಪ್ರಕರಣಗಳು ಕಾಣಿಸಿಕೊಂಡಿದ್ದು, ಸೋಂಕಿನ ಪ್ರಮಾಣ ಶೇ.4.59ರಷ್ಟಿದೆ. ಜನವರಿ 1 ವರೆಗೆ 5,910 ಮಂದಿ ಸೋಂಕಿತರಿ ದ್ದರು. ಕಳೆದ ಮೇ 20ರ ನಂತರ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಭಾನುವಾರ ದಾಖಲಾಗಿವೆ. ಇದು ಹಿಂದಿನ ದಿನಕ್ಕಿಂತಲೂ ಶೇ.17ರಷ್ಟು ಹೆಚ್ಚು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Leave a Comment

Your email address will not be published. Required fields are marked *