ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ಡಿಸಿ) ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಇದು ಯುಪಿಐಗೆ ಸರಿಸಮವಾದ ವಾಣಿಜ್ಯ ವಹಿವಾಟಿನ ವೇದಿಕೆಯಾಗಿ ರೂಪುಗೊಳ್ಳಲಿದೆ. ಈ ವೇದಿಕೆ ಅಮೆಜಾನ್, ಫ್ಲಿಪ್ಕಾರ್ಟ್ಗೆ ಪೈಪೋಟಿ ನೀಡಲಿದೆ.
ಸದ್ಯ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿದ್ದು, 12 ಕಂಪನಿಗಳು ಇದರಲ್ಲಿ ಖಚಿತ ಪಾಲುದಾರರಾಗಿ ಸೇರಿಕೊಂಡಿವೆ. ಇವುಗಳು ಒಟ್ಟಾಗಿ 185 ಕೋಟಿ ರೂಪಾಯಿ ಹೂಡಿಕೆ ಮಾಡಲಿವೆ. ಈ ಪ್ಲಾಟ್ಫಾರಂ ಅನ್ನು ಕಂಪನಿ ಕಾಯ್ದೆಯ ಪ್ರಕಾರ ಲಾಭದ ಉದ್ದೇಶವಿಲ್ಲದ ಕಂಪನಿ ಎಂದು ನೋಂದಣಿ ಮಾಡಿಸಲಾಗುವುದು ಅಥವಾ ಪಾಲುದಾರ ಕಂಪನಿಯಾಗಿ ನೋಂದಣಿ ಮಾಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಎಸ್ಬಿಐ, ಕೊಟಾಕ್ ಮಹಿಂದ್ರಾ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಪಿಎನ್ಬಿ, ಬಿಒಬಿ, ಎನ್ಎಸ್ಡಿಎಲ್, ಸಿಡಿಎಸ್ಎಲ್, ಬಿಎಸ್ಇ, ಎನ್ಎಸ್ಇ, ಎನ್ಪಿಸಿಐ, ಸಿಡ್ಬಿ, ನಬಾರ್ಡ್ಗಳು ಇದರಲ್ಲಿ ಪಾಲುದಾರ ಸಂಸ್ಥೆಗಳಾಗಿವೆ.