ಚಿಕ್ಕಮಗಳೂರು: ಅಲ್ಲಾ, ಈಶ್ವರ, ಜೀಸಸ್ರನ್ನ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರೋದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಒಬ್ಬ ಹಿಂದೂವಾಗಿ ಜೀಸಸ್, ಅಲ್ಲಾನನ್ನ ದೇವರು ಎಂದು ಒಪ್ಪಿಕೊಳ್ಳಬಹುದು. ಹಿಂದೂವಾಗಿ ಚರ್ಚ್, ಮಸೀದಿಗೂ ಕೂಡ ಹೋಗಬಹುದು ನಮ್ಮಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವವಿದೆ ಆದರೆ ಇಸ್ಲಾಂ ಆದ ತಕ್ಷಣ ಮಸೀದಿ ಹೊರತುಪಡಿಸಿ ದೇವಸ್ಥಾನದ ಬಾಗಿಲು ಬಂದ್ ಆಗುತ್ತೆ. ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿ ಉಳಿದ ದೇವರುಗಳ ಅಸ್ತಿತ್ವದ ಬಗ್ಗೆ ನಿರಾಕರಣೆ ಇದೆ. ಈ ವಿಚಾರದಲ್ಲಿ ಎರಡು ಧರ್ಮಗಳು ಆಲೋಚನೆ ಮಾಡಿದರೆ ಉತ್ತಮ ಎಂದಿದ್ದಾರೆ.