ವಾಷಿಂಗ್ಟನ್: ವಿಶ್ವದಲ್ಲಿ ಓಮಿಕ್ರಾನ್ ಜೊತೆಜೊತೆಗೆ ಕೊರೋನಾ ಆರ್ಭಟ ಶುರುವಾಗಿದೆ. ರೂಪಾಂತರಿ ಓಮಿಕ್ರಾನ್ ವೈರಸ್ ಬಗ್ಗೆ ದಿನಕ್ಕೊಂದು ಸುದ್ದಿಗಳು ಹರಡುತ್ತಿರುವಂತ ಈ ಹೊತ್ತಿನಲ್ಲಿಯೂ, ಎರಡು ದೇಶಗಳ ವಿಜ್ಞಾನಿಗಳು ನಡೆಸಿದಂತ ಅಧ್ಯಯನದಲ್ಲಿ ಓಮಿಕ್ರಾನ್ ಬಗ್ಗೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತ ಸುದ್ದಿಯೊಂದು ಬಹಿರಂಗ ಗೊಂಡಿದೆ.
ರೂಪಾಂತರಿ ಓಮಿಕ್ರಾನ್ ವೈರಸ್ ಬಗ್ಗೆ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದು, ಈ ಅಧ್ಯಯನದಲ್ಲಿ ಓಮಿಕ್ರಾನ್ ಅಷ್ಟೇನೂ ತೀವ್ರತೆಯನ್ನು ಹೊಂದಿಲ್ಲ. ಅದರಲ್ಲೂ ಡೆಲ್ಟಾ ಥಳಿಯಷ್ಟು ತೀವ್ರತೆಯನ್ನು ಹೊಂದಿಲ್ಲ ಎಂಬುದಾಗಿ ಸ್ಪೋಟ ಮಾಹಿತಿಯನ್ನು ಅಧ್ಯಯನ ವರದಿಯಿಂದ ಬಹಿರಂಗ ಪಡಿಸಿವೆ. ಈ ಮೂಲಕ ಓಮಿಕ್ರಾನ್ ಬಗ್ಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಅಧ್ಯಯನ ವರದಿ ಪ್ರಕಾರ 100 ಮಂದಿಯಲ್ಲಿ ಮೂವರಿಗೆ ಓಮಿಕ್ರಾನ್ ವೈರಸ್ ತೀವ್ರ ಸ್ವರೂಪದಲ್ಲಿ ಕಾಡಬಹುದೆಂಬುದಾಗಿ ತಿಳಿಸಿದೆ. ಇದಷ್ಟೇ ಅಲ್ಲದೇ ಸೋಂಕು ತಗುಲಿದಂತ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಕೂಡ ಶೇ.47ರಷ್ಟು ಎಂಬುದಾಗಿ ತಿಳಿಸಿದೆ.