ಬೆಳಗಾವಿ : ಸ್ನೇಹಕ್ಕೆ ಬದ್ಧ, ಸಮರಕ್ಕೆ ಸಿದ್ಧ ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂಇಎಸ್ ಪುಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ‘ಸೂರ್ಯಚಂದ್ರರಿವವರೆಗೂ ಬೆಳಗಾವಿ ನಮ್ಮದೇ ಆಗಿರುತ್ತೆ.
ಬೆಳಗಾವಿಯಲ್ಲಿ ಎಂದೆಂದಿಗೂ ಕನ್ನಡಿಗನೇ ಸಾರ್ವಭೌಮನಾಗಿರತ್ತಾನೆ. ಯಾಕಂದ್ರೆ, ಬೆಳಗಾವಿ ಕರ್ನಾಟಕದ ಮತ್ತೊಂದು ಶಕ್ತಿಕೇಂದ್ರ. ಹಾಗಾಗಿನೇ ಇಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ’ ಎಂದರು.
ಇನ್ನು ಈ ವೇಳೆ ಎಂಇಎಸ್ ಪುಂಡರಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ,’ ನಾವು ಕನ್ನಡಿಗರು ಸ್ನೇಹಕ್ಕೆ ಬದ್ಧ, ಸಮರಕ್ಕೆ ಸಿದ್ಧ. ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚೂ ಗಡಿಭೂಮಿ ಬಿಟ್ಟುಕೊಡುವುದಿಲ್ಲ. ಇನ್ನು ಗಡಿ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರನ್ನ ರಕ್ಷಿಸಲು ಸರ್ಕಾರ ಬದ್ಧವಾಗಿದೆ’ ಎಂದರು.
ಇನ್ನು ಮೂರ್ತಿ ಭಂಗ ಮಾಡಿದವರಿಗೆ ತಕ್ಕ ಶಿಕ್ಷೆ ಆಗುತ್ತೆ. ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುತ್ತೇನೆ. ಎಂಇಎಸ್ ಅಟ್ಟಹಾಸ ಅಡಗಿಸಲು ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇನ್ನು ಮೂರ್ತಿ ಭಗ್ನ ಮಾಡಿದವರ ಮೇಲೆ ದೇಶದ್ರೋಹದ ಕೇಸ್ ದಾಖಲಾಗುವುದು. ದಿಟ್ಟ ನಿಲುವು ತೆಗೆದುಕೊಂಡಾಗ ಮಾತ್ರ ಇಂತಹ ಕೃತ್ಯ ನಿಲ್ಲಿಸಲು ಸಾಧ್ಯ ಎಂದರು.