ಬೆಂಗಳೂರು : ಗುರುವಾರ ವಿಧಾನಸಭೆಯಲ್ಲಿ ಆಡಿದ ಮಾತು ವಿವಾದ ಸೃಷ್ಟಿಸಿ, ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಾಜಿ ಸ್ಪೀಕರ್ ರಮೇಶ್ ಕಮಾರ್ ಶುಕ್ರವಾರ ಸದನದಲ್ಲಿ ಕ್ಷಮೆ ಯಾಚಿಸಿದ್ದಾರೆ.
”ಲಘುವಾಗಿ ವರ್ತಿಸಬೇಕೆಂಬ ಉದ್ದೇಶ ನನಗಿರಲಿಲ್ಲ. ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರೆ ಕ್ಷಮೆ ಕೇಳಲು ನನಗೆ ಯಾವುದೇ ತೊಂದರೆ ಇಲ್ಲ.ನನ್ನ ಹೃದಯಾಳದಿಂದ ನಾನು ಕ್ಷಮೆಯಾಚಿಸುತ್ತೇನೆ” ಎಂದು ಕಲಾಪ ಆರಂಭಕ್ಕೂ ಮುನ್ನ ರಮೇಶ್ ಕುಮಾರ್ ಕ್ಷಮೆ ಯಾಚಿಸಿದ್ದಾರೆ.
”ಇದನ್ನು ಬೆಳೆಸುವುದು ಬೇಡ ಇಲ್ಲಿಗೆ ಮುಗಿಸಿ” ಎಂದು ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಅವರು ಸದನದಲ್ಲಿ ಮನವಿ ಮಾಡಿದರು.
ರಮೇಶ್ ಕುಮಾರ್ ಅವರು ಇಂಗ್ಲಿಷ್ ಗಾದೆ ಮಾತು ಹೇಳಿದರು, ಅವರ ಮೇಲೆ ಗೌರವವಿತ್ತು.ಅವರು ಹಿರಿಯರು, ತುಂಬಾ ತಿಳಿದುಕೊಂಡವರು, ನಾವು ನೂತನ ಶಾಸಕರಾಗಿದ್ದಾಗ ಅವರನ್ನು ನೋಡಿ ಕಲಿತವರು. ಸ್ಪೀಕರ್ ಆಗಿದ್ದವರು ಆದ್ದರಿಂದ ಅವರು ಆ ರೀತಿ ಹೇಳಿಕೆ ನೀಡಬಾರದಿತ್ತು.ನಾನು ಅವರು ಹೇಳಿಕೆಯನ್ನು ಖಂಡಿಸುತ್ತೇನೆ. ಸದನದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ. ಇದರ ಬಗ್ಗೆ ನಾವು ಧ್ವನಿ ಎತ್ತುತ್ತೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ ನೀಡಿದ್ದಾರೆ.