ಉಪ್ಪಿನಂಗಡಿ: ಇಲ್ಲಿನ ಠಾಣೆಯ ಮುಂಭಾಗ ನಡೆದ ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು 10 ಮಂದಿ ಪಿಎಫ್ಐ ಕಾರ್ಯಕರ್ತರ ಮೇಲೆ ದೂರನ್ನು ಪೊಲೀಸರು ಸ್ವಯಂ ದಾಖಲಿಸಿಕೊಂಡಿದ್ದಾರೆ.
ತಾಹಿರ್, ಸಾದಿಕ್, ಅಬ್ದುಲ್ ಮುಬಾರಕ್, ಶರೀನ್, ಮೊಹಮ್ಮದ್ ಜಾಹೀರ್, ಪೈಝಲ್, ಹನೀಫ್, ಕಾಸಿಂ , ಆಸಿಫ್, ತುಪೈಲ್ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಇವರ ವಿರುದ್ಧ ಐಪಿಸಿಯ ವಿವಿಧ ಕಲಂ ಮತ್ತು ಆಸ್ತಿ ನಷ್ಠ ಕಾಯ್ದೆಯಡಿಯಲ್ಲೂ ಕೇಸ್ ದಾಖಲಾಗಿದೆ.
ಇವರು ಅಕ್ರಮವಾಗಿ ಠಾಣೆ ಮುಂದೆ ಜಮಾಯಿಸಿ ಠಾಣೆಗೆ ಕಲ್ಲು ಎಸೆದು ಹಾನಿಗೊಳಿಸಿದ್ದಾರೆ ಮತ್ತು ಸ್ವತ್ತುಗಳನ್ನು ನಾಶಪಡಿಸಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ.
ಪಿಎಫ್ ಐ ನಾಯಕರ ಅಕ್ರಮ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರಿಗೆ ಮಂಗಳವಾರ ರಾತ್ರಿ ಪೊಲೀಸರು ಲಾಠೀ ಚಾರ್ಜ್ ಮಾಡಿದ್ದರು. ಈ ವೇಳೆ 50ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.