ನವದೆಹಲಿ: ಯಾವ ಹುಡುಗಿ ತೆಳ್ಳಗಿದ್ದಾಳೆ ಎನ್ನುವ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಳೂ ಅದೆ ಹುಡುಗಿ ಎಲ್ಲವನ್ನೂ ಮೆಟ್ಟಿನಿಂತು ವಿಶ್ವಸುಂದರಿ ಪಟ್ಟವನ್ನ ಅಲಂಕರಿಸಿ ಭಾರತಕ್ಕೆ ಅರ್ಪಿಸಿದ್ದಾಳೆ.
ಭಾರತದ ಹರ್ನಾಜ್ ಸಂಧು 70 ನೇ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. 21 ವರ್ಷಗಳ ನಂತರ ಭಾರತೀಯ ಸುಂದರಿಯೊಬ್ಬರಿಗೆ ಈ ಪಟ್ಟ ಸಿಕ್ಕಿದೆ. ಲಾರಾ ದತ್ತಾ 2000 ರಲ್ಲಿ ವಿಶ್ವ ಸುಂದರಿ ಆದರು. ಅಂದಿನಿಂದ ಭಾರತ ಈ ಪ್ರಶಸ್ತಿಗಾಗಿ ಕಾಯುತ್ತಿತ್ತು.
ಡಿಸೆಂಬರ್ 12 ರಂದು ಇಸ್ರೇಲ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ 79 ದೇಶಗಳ ಸುಂದರಿಯರನ್ನ ಹಿಂದಿಕ್ಕಿ ಮಿಸ್ ಯೂನಿವರ್ಸ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಮಿಸ್ ಯೂನಿವರ್ಸ್ ನ ರನ್ನರ್ ಅಪ್ ಸ್ಥಾನ ಪರಾಗ್ವೆಯ ಸುಂದರಿ ”ನಾಡಿಯಾ ಫೆರೇರಾ” ಮತ್ತು ಎರಡನೇ ರನ್ನರ್ ಅಪ್ ಮಿಸ್ ಸೌತ್ ಆಫ್ರಿಕಾ ”ಲಾಲೆಲಾ ಮಸ್ವಾನೆ”. ಪಾಲಾಗಿದೆ. ಮಿಸ್ ಯೂನಿವರ್ಸ್ ಸ್ಪರ್ಧೆಯ ತೀರ್ಪುಗಾರರಾಗಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಅವಕಾಶ ಸಿಕ್ಕಿತ್ತು.
ಚಂಡೀಗಢದ ಹರ್ನಾಜ್ ಸಂಧು ಇತ್ತೀಚೆಗೆ ‘ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ 2021’ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಂದಿನಿಂದ, ಅವರು ಮಿಸ್ ಯೂನಿವರ್ಸ್ 2021 ಕಿರೀಟವನ್ನು ಗೆಲ್ಲಲು ಶ್ರಮಿಸಲು ಪ್ರಾರಂಭಿಸಿದರು.
21 ವರ್ಷದ ಹರ್ನಾಜ್ ವೃತ್ತಿಯಲ್ಲಿ ಮಾಡೆಲ್. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್‌ನಲ್ಲಿ ಮಾಡಿದರು. ಚಂಡೀಗಢದಿಂದ ಪದವಿ ಪಡೆದ ನಂತರ, ಈ ದಿನಗಳಲ್ಲಿ ಅವಳು ತನ್ನ ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸುತ್ತಿದ್ದಾಳೆ. ಮಾಡೆಲಿಂಗ್ ಮತ್ತು ಅನೇಕ ಸ್ಪರ್ಧೆಗಳನ್ನು ಗೆದ್ದರೂ, ಅವರು ತಮ್ಮ ವಿದ್ಯಾಭ್ಯಾಸದಿಂದ ದೂರವಾಗಿಲ್ಲ.
ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಕಾಸ್ಟ್ಯೂಮ್ ರೌಂಡ್‌ನಲ್ಲಿ ಹರ್ನಾಜ್ ಸಂಧು ಭಾರತೀಯ ಸಂಸ್ಕೃತಿಯ ಉಡಪುಗಳನ್ನ ಧರಿಸಿದ್ದರು.
ಸುಂದರಿಗೆ ಒಲಿದಿರುವ ಪ್ರಶಸ್ತಿಗಳು
2017: ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ
2018: ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್
2019: ಫೆಮಿನಾ ಮಿಸ್ ಇಂಡಿಯಾ ಪಂಜಾಬ್
2021: ಮಿಸ್ ಯೂನಿವರ್ಸ್ ಇಂಡಿಯಾ