ಬಂಟ್ವಾಳ: ಕೃಷಿಕರೊಬ್ಬರ ಮೊಬೈಲ್ ಗೆ ರವಿ ಪೂಜಾರಿ ಹೆಸರು ಹೇಳಿಕೊಂಡು 25 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಕೊಡದೇ ಇದ್ದರೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣವನ್ನು ಬಂಟ್ವಾಳ ಜೆಎಂಎಫ್ ಸಿ ನ್ಯಾಯಾಲಯ ರದ್ದು ಪಡಿಸಿದೆ.
ವಿಟ್ಲಾ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಾತೃಶ್ರೀ ಕೃಪಾ ನಿವಾಸಿ ವೆಂಕಟರಮಣ ಭಟ್ ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈಗ ನ್ಯಾಯಾಲಯದಲ್ಲಿ ದೂರುದಾರರು ಪ್ರಕರಣವನ್ನು ಮುಂದುವರಿಸದಿರಲು ನಿರ್ಧರಿಸಿದ ಕಾರಣ ಪ್ರಕರಣ ರದ್ದುಗೊಳ್ಳುವ ಮೂಲಕ ಇತ್ಯರ್ಥಗೊಂಡಂತಾಗಿದೆ.