ಕೋಲಾರ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಟೊಮೊಟೊ ಬೆಲೆ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಕೆಜಿ ಟೊಮೇಟೋ ದರ 70 ರೂ.ಗಿಂತಲೂ ಹೆಚ್ಚಾಗಿದೆ. ಮಳೆಯ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬರುತ್ತಿರುವುದರಿಂದ ದರ ಏರಿಕೆಯಾಗಿದೆ. ಜೊತೆಗೆ ಉಳಿದ ತರಕಾರಿ, ಸೊಪ್ಪು ದರ ಕೂಡ ಹೆಚ್ಚಾಗಿದೆ.
ಟೊಮೆಟೊ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದರೆ ರೈತರಿಗೆ ಸಂತಸ ತಂದಿದೆ. 26 -27 ಕೆಜಿಯ ಒಂದು ಬಾಕ್ಸ್ ಗೆ ಕ್ಕೆ 1200 ರಿಂದ 1500 ರೂಪಾಯಿ ವರೆಗೂ ದರ ಇದೆ. ಕಳೆದ ವಾರ ಒಂದು ಬಾಕ್ಸ್ ಗೆ 700 ರೂ.ವರೆಗೂ ದರ ಇತ್ತು. ಈಗ 1500 ರೂಪಾಯಿವರೆಗೆ ಏರಿಕೆಯಾಗಿ ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ. ಕೋಲಾರ ಮಾರುಕಟ್ಟೆ ಏಷ್ಯಾದ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾಗಿದ್ದು ಒಂದು ಬಾಕ್ಸ್ ಗೆ 1200 ರೂ. ಗಿಂತಲೂ ಹೆಚ್ಚಿನ ದರ ಇದೆ. ಮಳೆಯ ಕಾರಣ ಹೊಲದಲ್ಲಿ ಟೊಮೆಟೊ ಹಾಳಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಕಾರಣ ದರ ಹೆಚ್ಚಾಗಿದೆ. ಕೆಲವು ಬೆಳೆಗಾರರಿಗೆ ದರ ಹೆಚ್ಚಳ ಸಂತಸ ತಂದಿದೆ. ಬೆಳೆ ಕಳೆದುಕೊಂಡ ರೈತರಿಗೆ ನಷ್ಟವಾಗಿದೆ.