Ad Widget .

ಪೇಸ್ ಬುಕ್ ನಲ್ಲಿ ಪ್ರವಾದಿ ನಿಂದನಾತ್ಮಕ ಕಮೆಂಟ್| ಆರೋಪಿಯ ಬಂಧನ|

Ad Widget . Ad Widget .

ಸುಳ್ಯ: ಕಳೆದೊಂದು ವಾರದ ಹಿಂದೆ ಪೇಸ್ ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ (ಸ.ಅ)ರನ್ನು ಆಶ್ಲೀಲ ಪದಗಳಿಂದ‌ ನಿಂದನೆಗೈದ ಆರೋಪದಲ್ಲಿ ತಾಲೂಕಿನ ಐವರ್ನಾಡು ಗ್ರಾಮದ ಜಗದೀಶ್ ಕೈವಲ್ತಡ್ಕ ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಜಗದೀಶ್ ತನ್ನ ಪೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಪದಬಳಕೆ ಮಾಡಿ ಪ್ರವಾದಿಯನ್ನು ನಿಂದಿಸಿ ಕೋಟ್ಯಾಂತರ ಜನರ‌ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾನೆ, ಈ ಕುರಿತಂತೆ ಪೋಲಿಸರು ಕ್ರಮ ಕೈಗೊಳ್ಳಬೇಕು ಮುಸ್ಲಿಂ ಸಂಘಟನೆಗಳು ದೂರು ನೀಡಿದ್ದವು. ಆದರೆ ದೂರು ನೀಡಿ ವಾರ ಕಳೆದರೂ ಆರೋಪಿಯನ್ನು ಪೊಲೀಸರು ಬಂಧಿಸಿರಲಿಲ್ಲ. ಪೊಲೀಸರ ನಡೆಯನ್ನು ಖಂಡಿಸಿ ಸುಳ್ಯ ಮುಸ್ಲಿಂ ಒಕ್ಕೂಟದ ವತಿಯಿಂದ ದ.ಕ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳಿಗೆ ಸಂಚಾಲಕ ಇಕ್ಬಾಲ್ ಎಲಿಮಲೆ ಮುಂದಾಳತ್ವದಲ್ಲಿ ಇಂದು ದೂರು ನೀಡಲಾಗಿತ್ತು.

ಈ ಕುರಿತು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ವರೀಷ್ಟಾಧಿಕಾರಿಗಳು ಆರೋಪಿಯನ್ನು ಬಂಧಿಸಲು ಸೂಚಿಸಿದ್ದರು. ಇದರ ಬೆನ್ನಲ್ಲೇ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ

Leave a Comment

Your email address will not be published. Required fields are marked *