ಡಿಜಿಟಲ್ ಡೆಸ್ಕ್: ತಮಿಳುನಾಡು ಹಾಗೂ ಪುದುಚೇರಿ ಗಡಿಯಲ್ಲಿ ಇತ್ತೀಚೆಗೆ ಸ್ಕೂಟರ್‌ವೊಂದು ಬೆಂಕಿಗಾಹುತಿಯಾಗಿ, ಅದರಲ್ಲಿದ್ದ ತಂದೆ ಮಗ ಮೃತಪಟ್ಟಿದ್ದರು. ಈ ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್, ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವ ದೃಶ್ಯ ಇದರಲ್ಲಿದೆ.
‘ಇಲೆಕ್ಟ್ರಿಕ್ ಸ್ಕೂಟರ್ ಆಗಿರುವ ಕಾರಣ ಸ್ಫೋಟ ನಡೆದಿದೆ’ ಎಂದು ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗಿತ್ತು.
ನೈಜ ವರದಿಗಳ ಪ್ರಕಾರ ಬ್ಯಾಟರಿಚಾಲಿತ ಬೈಕ್ ಆಗಿದ್ದಕ್ಕೆ ಸ್ಫೋಟ ನಡೆದಿದೆ ಎಂಬುದು ಸುಳ್ಳು. ‘ಸ್ಕೂಟರ್‌ನಲ್ಲಿ ದೀಪಾವಳಿ ಹಬ್ಬಕ್ಕಾಗಿ ಖರೀದಿಸಿದ್ದ ಪಟಾಕಿಯನ್ನು ಸಾಗಿಸಲಾಗುತ್ತಿತ್ತು. ಪಟಾಕಿಯನ್ನು ಲಗೇಜ್ ಇರಿಸುವ ಜಾಗದಲ್ಲಿಟ್ಟು, ಅದರ ಮೇಲೆ ಮಗುವನ್ನು ಕೂರಿಸಲಾಗಿತ್ತು. ತೀವ್ರ ಒತ್ತಡ ಉಂಟಾಗಿ, ಪಟಾಕಿ ಸ್ಫೋಟಗೊಂಡಿದೆ’ ಎಂಬುದು ಸತ್ಯಾಂಶ.