Ad Widget .

ಸುಳ್ಯ: ಹಿಂದೂ ಎಂದು ನಂಬಿಸಿ ಅನುಚಿತ ವರ್ತನೆಗೈದ ಮುಸ್ಲಿಂ ಯುವಕ| ಠಾಣೆ ಮೆಟ್ಟಿಲೇರಿದ ಯುವತಿ

Ad Widget . Ad Widget .

ಸುಳ್ಯ: ಅನ್ಯಕೋಮಿನ ಯುವಕನೋರ್ವ ಸಾಮಾಜಿಕ ಜಾಲತಾಣ ದಲ್ಲಿ ಪರಿಚಯವಾದ ಯುವತಿಯೋರ್ವಳನ್ನು ನಾನು ಹಿಂದೂ ಯುವಕನೆಂದು ಸುಳ್ಳು ಹೆಸರು ಹೇಳಿ ನಂಬಿಸಿ ಆಕೆಯನ್ನು ಬಲವಂತವಾಗಿ ಸುತ್ತಾಡಿಸಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ವಂಚನೆಗೆ ಒಳಗಾದ ಯುವತಿ ಸುಳ್ಯ ಪೋಲಿಸ್ ಮೆಟ್ಟಿಲೇರಿ ದೂರು ನೀಡಿದ್ದಾಳೆ.

Ad Widget . Ad Widget .

ಮಡಿಕೇರಿ ಮೂಲದ ಯುವಕನೋರ್ವ ಕಳೆದ 2 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು ತನ್ನ ಹೆಸರನ್ನು ಕೌಶಲ್ ‌ಎಂದು ಪರಿಚಯಿಸಿಕೊಂಡಿದ್ದನು ಎನ್ನಲಾಗಿದೆ.

ನ.೧೧ ರಂದು ಆತ ಯುವತಿಯನ್ನು ಸುಳ್ಯಕ್ಕೆ ಬರುವಂತೆ ಒತ್ತಾಯ ಮಾಡಿದ್ದು, ಹಿಂದೂ ಯುವಕನೆಂದು ನಂಬಿದ ಯುವತಿ ಒತ್ತಾಯಕ್ಕೆ ಮಣಿದು‌ ಸುಳ್ಯಕ್ಕೆ ಬಂದಿದ್ದಾಳೆ. ಅಲ್ಲಿಂದ ಅವನು ಆಕೆಯನ್ನು ಬೈಕಿನಲ್ಲಿ‌ ಕುಳ್ಳಿರಿಸಿ ನಂತರ ನೇರವಾಗಿ ಮಡಿಕೇರಿಗೆ ‌ಕರೆದೊಯ್ದಿದ್ದಾನೆ. ಯುವತಿ ಮಡಿಕೇರಿಗೆ ಬರುವುದಿಲ್ಲ ಎಂದು ಹೇಳಿದರೂ ಆತನು ಬೈಕನ್ನು ರಭಸದಿಂದ ಮಡಿಕೇರಿಗೆ ಚಲಾಯಿಸಿದ್ದು, ಅಲ್ಲಿ ಆಕೆಯನ್ನು ಪಾರ್ಕಿಗೆ ಕರೆದು ಕೊಂಡು ಹೋಗಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿರುವುದಲ್ಲದೆ, ಮಾನಭಂಗಕ್ಕೆ ಯತ್ನಿಸಿದ್ದಾನೆ. ವಿರೋಧಿಸಿದಾಗ ನಿನ್ನನ್ನು‌ ಕೊಲ್ಲುತ್ತೇನೆ ಎಂದು‌ ಬೆದರಿಸಿ ನಾನು ಹಿಂದೂ‌‌ ಅಲ್ಲ ಮುಸ್ಲಿಂ ನನ್ನ ‌ಹೆಸರು ತಸ್ಲೀಮ್ ಎಂದು ಹೇಳಿದ್ದು, ನನ್ನನ್ನು ಬಿಟ್ಟು ಹೋದರೆ ನಮ್ಮಿಬ್ಬರ ಫೋಟೊ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತೇನೆ ಎಂದು ಹೆದರಿಸಿರುವುದಾಗಿಯೂ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಆ ಬಳಿಕ ಯುವತಿ ನಾನು ಯಾರಲ್ಲಿಯೂ ಹೇಳುವುದಿಲ್ಲ. ನನ್ನನ್ನು ಸುಳ್ಯಕ್ಕೆ ಬಿಡು ಎಂದು ಕೇಳಿಕೊಂಡಿದ್ದು ಅದಕ್ಕೆ ಒಪ್ಪಿ ಆತನು ಮತ್ತೆ ಸುಳ್ಯಕ್ಕೆ ಕರೆ ತಂದು ಬಿಟ್ಟಿದ್ದಾನೆ. ಜೀವ ಬೆದರಿಕೆ ನೀಡಿ ಸುಳ್ಳು ಹೇಳಿ‌ ವಂಚನೆ ಮಾಡಿ‌ ಅನುಚಿತವಾಗಿ ವರ್ತಿಸಿದ ಆತನ ವಿರುದ್ಧ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ವಂಚನೆಗೊಳಗಾದ ಯುವತಿ ಸುಳ್ಯ ಪೋಲಿಸ್ ಠಾಣೆಯಲ್ಲಿ‌ದೂರು ನೀಡಿರುವ ಬಗ್ಗೆ ತಿಳಿದು ಬಂದಿದೆ.

Leave a Comment

Your email address will not be published. Required fields are marked *