ನವದೆಹಲಿ: ದೇಶಾದ್ಯಂತ 500 ರೂ. ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಇಂದಿಗೆ 5 ವರ್ಷವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡಿದ ನಂತರ ದೇಶದಲ್ಲಿ ಹೊಸದಾಗಿ 2000 ರೂ. ಮತ್ತು 500 ರೂಪಾಯಿ ಹಾಗೂ 200 ರೂ.ಹೊಸ ಸರಣಿ ನೋಟು ಚಲಾವಣೆಗೆ ಬಂದಿವೆ. ನಗದು ವಹಿವಾಟಿನ ಜೊತೆಗೆ ಡಿಜಿಟಲ್ ವಹಿವಾಟು ಕೂಡ ಏರಿಕೆ ಕಂಡಿದೆ.
ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಯುಪಿಐ, ನೆಟ್ ಬ್ಯಾಂಕಿಂಗ್ ಮೊದಲಾದವುಗಳ ಮೂಲಕ ನಗದು ರಹಿತ ವ್ಯವಹಾರ ಹೆಚ್ಚಾಗಿದೆ. ಕೊರೋನಾ ನಂತರದಲ್ಲಿ ನಗದು ವಹಿವಾಟು ಏರಿಕೆ ಕಂಡಿದೆ. ದೇಶದಲ್ಲಿ ಮಾರ್ಚ್ 31ರ ಅಂಕಿ ಅಂಶದ ಪ್ರಕಾರ 500 ಮತ್ತು 2000 ರೂಪಾಯಿ ಮೌಲ್ಯದ ನೋಟುಗಳು ಶೇಕಡ 85.7 ರಷ್ಟು ಪಾಲು ಹೊಂದಿವೆ ಎನ್ನಲಾಗಿದೆ.