Ad Widget .

ದೀಪದ ಬತ್ತಿಯಂತೆ ಉರಿಯುತ್ತೆ ಈ ಎಲೆ ಚಿಗುರು| ಪಂಜದಲ್ಲೊಂದು ವಿಚಿತ್ರ ಗಿಡ ಪತ್ತೆ|

ಸುಳ್ಯ: ನಾಗರಿಕ ಸಮಾಜಕ್ಕೆ ಹೊಂದಿಕೊಳ್ಳುವ ಮೊದಲು‌ ಮನುಷ್ಯ ಕಲ್ಲಿನಿಂದ ಉಜ್ಜಿ ಬೆಂಕಿ ತಯಾರಿಸುತ್ತಿದ್ದ ಎಂಬ ಬಗ್ಗೆ ಇತಿಹಾಸದಲ್ಲಿ ತಿಳಿದಿದ್ದು, ಹೀಗೆ ತಯಾರಿಸಿದ ಬೆಂಕಿಯನ್ನು ಬೆಳಕಾಗಿ ಉಪಯೋಗಿಸಲು ಬಳಸುತ್ತಿದ್ದ. ಆದರೆ ಪ್ರಕೃತಿಯ ಮಡಿಲಲ್ಲಿಯೂ ಇಂತದ್ದೇ ಒಂದು ಅಪರೂಪದ ಗಿಡವೊಂದು ಇದೀಗ ಪತ್ತೆಯಾಗಿದೆ.

Ad Widget . Ad Widget . Ad Widget . Ad Widget .

ತಾಲೂಕಿನ ಪಂಜ ಎಂಬಲ್ಲಿ ಈ ಅಪರೂಪದ ಗಿಡ ಪತ್ತೆಯಾಗಿದೆ. ಇಲ್ಲಿನ ಅಳ್ಪೆ ನಿವಾಸಿ ಜಿನ್ನಪ್ಪ ಎನ್ನುವವರ ರಬ್ಬರ್ ತೋಟದಲ್ಲಿ ಈ ಗಿಡ ಪತ್ತೆಯಾಗಿದ್ದು, ಈ ಗಿಡ ಜಿನ್ನಪ್ಪ ಅವರ ಗಮನಕ್ಕೆ ಬರಲೂ ಒಂದು ಕಾರಣವಿದೆ. ಬೆಳದಿಂಗಳ ರಾತ್ರಿಯಲ್ಲಿ ಈ ಗಿಡದ ಎಲೆಯ ಚಿಗುರುಗಳು ಪ್ರಕಾಶಮಾನವಾಗಿ ಮಿಂಚುತ್ತಿರುವುದನ್ನು ಗಮನಿಸಿದ್ದ ಜಿನ್ನಪ್ಪರು ಬೆಳಿಗ್ಗಿನ ಜಾವ ಈ ಗಿಡದ ಬಳಿ ಬಂದು ಪರಿಶೀಲನೆ ನಡೆಸಿದ್ದರು. ಆದರೆ ಯಾವುದೇ ರೀತಿಯ ವಿಶೇಷತೆಯನ್ನು ಅಂದು ಅವರು ಗಮನಿಸಿರಲಿಲ್ಲ. ಮತ್ತೆ ರಾತ್ರಿ ಸಂದರ್ಭದಲ್ಲಿ ಅದೇ ರೀತಿಯ ಹೊಳಪು ಆ ಗಿಡದ ಎಲೆಗಳ ಚಿಗುರುಗಳಿಂದ ಕಂಡು ಬಂದ ಹಿನ್ನಲೆಯಲ್ಲಿ ಯಾವುದೇ ಬೆಳಕಿನ ಅಂಶವಿರುವ ಗಿಡವಾಗಿರಬಹುದೆಂದು ತಿಳಿದುಕೊಂಡಿದ್ದಾರೆ.’

Ad Widget . Ad Widget .

ವಿಶೇಷ ಗಿಡದ ಹೆಸರು ಪ್ರಣತಿಪತ್ರ

ಈ ಕಾರಣಕ್ಕೆ ಗಿಡದ ಚಿಗುರುಗಳನ್ನು ಮನೆಗೆ ಕೊಂಡೊಯ್ದು, ದೀಪಕ್ಕೆ ಎಣ್ಣೆ ಹಾಕಿ ಹತ್ತಿಯ ಬತ್ತಿ ಬದಲು ಈ ಚಿಗುರುಗಳನ್ನು ಎಣ್ಣೆಯಲ್ಲಿ ಅದ್ದಿ ಬೆಂಕಿ ಕೊಟ್ಟಿದ್ದಾರೆ. ಹತ್ತಿಯ ಬತ್ತಿಗಿಂತಲೂ ಪ್ರಕಾಶಮಾನವಾಗಿ ಈ ಎಲೆಯ ಚಿಗುರು ಉರಿಯುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ವಿಚಾರವನ್ನು ತಮ್ಮ ಪರಿಚಯವಿರುವ ಧಾರ್ಮಿಕ ಆಚರಣೆಯ ವ್ಯಕ್ತಿಯೊಬ್ಬರಲ್ಲಿ ತಿಳಿಸಿದಾಗ ಅವರು ಈ ಗಿಡದ ಬಗ್ಗೆ ಜಿನ್ನಪ್ಪರಿಗೆ ಮಾಹಿತಿ ನೀಡಿದ್ದಾರೆ. ಜಿನ್ನಪ್ಪ ಮಾಹಿತಿ ಪ್ರಕಾರ ಅಪರೂಪವಾಗಿ ಕಂಡ ಈ ಗಿಡ ಪ್ರಣತಿಪತ್ರ ಎಂದು ತಿಳಿದುಬಂದಿದೆ.

ಬೆಳಗ್ಗೆಯಿಂದ ಸಂಜೆಯ ತನಕ ನಿರಂತರ ಉರಿಯುತ್ತವೆ

ಸಾಮಾನ್ಯವಾಗಿ ಹತ್ತಿ ಅಥವಾ ಬಟ್ಟೆಯ ಬತ್ತಿಯನ್ನು ನಿರಂತರ ಒಂದೆರಡು ಗಂಟೆಗಳ ಕಾಲ ಉರಿಸಿದಲ್ಲಿ ಬತ್ತಿಯು ಕರಗಿ ಹೋದರೆ ಈ ಚಿಗುರು ಎಣ್ಣೆ ಹಾಕುತ್ತಿರುವವರೆಗೂ ನಿರಂತರವಾಗಿ ಉರಿಯುತ್ತದೆ. ಜಿನ್ನಪ್ಪರ ಪ್ರಕಾರ ಈ ಗಿಡ ಪತ್ತೆಯಾದ ಬಳಿಕ ಅವರ ಮೂಲ ಮನೆಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ಇದೇ ಎಲೆಯ ಚಿಗುರುಗಳನ್ನು ಬತ್ತಿಯ ರೂಪದಲ್ಲಿ ಬಳಸಿಕೊಂಡಿದ್ದು, ಬೆಳಿಗ್ಗಿನಿಂದ ಸಂಜೆಯ ತನಕ ಇದು ನಿರಂತರ ಉರಿಯುವುದನ್ನು ಪರಿಶೀಲನೆ ನಡೆಸಿರುವುದಾಗಿಯೂ ಜಿನ್ನಪ್ಪರು ಹೇಳುತ್ತಾರೆ.

Leave a Comment

Your email address will not be published. Required fields are marked *