ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜದ ಭಾಗದಲ್ಲಿ ಆಗಾಗ್ಗೆ ಕಾಡಾನೆಗಳು ಹಿಂಡು ಗೋಚರವಾಗುತ್ತಿರೋದು ಸ್ಥಳಿಯರು ಹಾಗೂ ಕೆಲ ಪ್ರವಾಸಿಗರಲ್ಲಿ ಆತಂಕ ತಂದಿದೆ.
ಇಲ್ಲಿನ ಕಾಡು ಸದಾ ಹಚ್ಚಹಸಿರಿನಿಂದ ಕಂಗೊಳಿಸುತ್ತೆ. ಹಾಗಾಗಿ, ಈ ಭಾಗದಲ್ಲಿ ಸದಾ ಕಾಡುಪ್ರಾಣಿಗಳು ಯತೇಚ್ಛವಾಗಿರುತ್ತವೆ. ಇದೀಗ, ಈ ಬೈರಾಪುರ ಗ್ರಾಮದ ಸುತ್ತಮುತ್ತ ಕಾಡಾನೆಗಳು ಹಿಂಡು ಸ್ಥಳಿಯರಲ್ಲಿ ಭಯ ತರಿಸಿದೆ. ಎತ್ತಿನಭುಜಕ್ಕೆ ಭೇಟಿ ನೀಡಿದ್ದ ಪ್ರವಾಸಿಗರಿಗೆ ಕಾಡಾನೆಗಳು ದರ್ಶನ ನೀಡಿವೆ. ಹಾಗಾಗಿ, ಸ್ಥಳೀಯರು ಈ ಭಾಗಕ್ಕೆ ಬರುವ ಪ್ರವಾಸಿಗರು ಎಚ್ಚರದಿಂದಿರಬೇಕು ಎಂದು ಮನವಿ ಮಾಡಿದ್ದಾರೆ. ಇನ್ನೂ ಮೂಡಿಗೆರೆ ತಾಲೂಕಿನ, ಬೈರಾಪುರ, ಸಾರಾಗೋಡು, ಕುಂದೂರು, ಗೌಡಹಳ್ಳಿ, ಕೋಗಿಲೆ, ಮೂಲರಹಳ್ಳಿ, ಗುತ್ತಿ, ಬೈರಾಪುರ, ಊರಬಗೆ ಸೇರಿದಂತೆ ಹತ್ತಾರು ಹಳ್ಳಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಪ್ರತಿ ವರ್ಷ ಲಕ್ಷಾಂತರ ಮೌಲ್ಯದ ಬೆಳೆ ಕಾಡಾನೆ ಪಾಲಾಗುತ್ತಿದೆ.
ಹಾಗಾಗಿ, ಈ ಭಾಗದ ಜನ, ಕಾಡಾನೆಗಳನ್ನ ಸ್ಥಳಾಂತರಿಸಿ, ಇಲ್ಲ ನಮಗೆ ಪರ್ಯಾಯ ಭೂಮಿ ನೀಡಿ, ನಾವೇ ಬೇರೆಡೆ ಹೋಗಿ ಬದುಕು ಕಟ್ಟಿಕೊಳ್ಳುತ್ತೇವೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಅತ್ತ ಆನೆ ಸಮಸ್ಯೆಯನ್ನೂ ನೀಗಿಸುತ್ತಿಲ್ಲ. ಇತ್ತ ಪರ್ಯಾಯ ಭೂಮಿ ಬಗ್ಗೆಯೂ ಯೋಚಿಸಿಲ್ಲ. ಜನ ಅನಿವಾರ್ಯವಾಗಿ ಆನೆ ಭಯದಲ್ಲೇ ಬದಕುತ್ತಿದ್ದಾರೆ.
ಹಾಗಾಗಿ, ಪ್ರವಾಸಿಗರು ಎಚ್ಚರದಿಂದ ಇರಬೇಕೆಂದು ಸ್ಥಳಿಯರು ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.