ಪುತ್ತೂರು : ಆರು ತಿಂಗಳ ಹಿಂದೆ ಮೃತಪಟ್ಟಿರುವ ವ್ಯಕ್ತಿಯೊಬ್ಬರಿಗೆ ಇದೀಗ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲಾಗಿರುವ ಕುರಿತಂತೆ ಎಸ್ಎಂಎಸ್ ಬಂದಿರುವ ಘಟನೆ ವಿಟ್ಲದಲ್ಲಿ ನಡೆದಿದೆ.
ಮಾಣಿ ಸಮೀಪದ ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ್ ಎಂಬವರು ಏಪ್ರಿಲ್ 27ರಂದು ಮೃತಪಟ್ಟಿದ್ದಾರೆ. ಆದರೆ ಅಕ್ಟೋಬರ್ 14ರಂದು ಅವರಿಗೆ ಕೋವಿಡ್ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂಬ ಎಸ್ಎಂಎಸ್ ಬಂದಿದೆ ಎಂದು ಮೃತ ಹಸೈನಾರ್ ಅವರ ಪುತ್ರ ಸಾದಿಕ್ ಆರೋಪಿಸಿದ್ದಾರೆ.
ಹಸೈನಾರ್ ಅವರಿಗೆ ಮಾರ್ಚ್ 24ರಂದು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆಯ ಪ್ರಥಮ ಡೋಸ್ ನೀಡಲಾಗಿತ್ತು. ಏಪ್ರಿಲ್ 27ರಂದು ಅವರು ಮೃತಪಟ್ಟಿದ್ದಾರೆ. ಅಕ್ಟೋಬರ್ 14ರಂದು ನನ್ನ ಮೊಬೈಲ್ಗೆ ಒಟಿಪಿ ಬಂದಿದ್ದು, ಬಳಿಕ ಈ ಎಸ್ಎಂಎಸ್ ಬಂದಿದೆ ಎಂದು ಹೇಳಿದ್ದಾರೆ.ಎಸ್ಎಂಎಸ್ ಓದಿದಾಗ ನನ್ನ ತಂದೆಗೆ ಎರಡನೇ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಇತ್ತು. ಬಳಿಕ ನಾನು ಲಿಂಕ್ ಓಪನ್ ಮಾಡಿ ಪಿಡಿಎಫ್ ಪರಿಶೀಲಿಸಿದಾಗ ಅದರಲ್ಲೂ ಎರಡನೇ ಡೋಸ್ ನೀಡಿರುವ ಬಗ್ಗೆ ದೃಢಪಡಿಸಲಾಗಿದೆ ಎಂದು ಸಾದಿಕ್ ತಿಳಿಸಿದ್ದಾರೆ.