Ad Widget .

ಟೂರ್ ಪ್ಯಾಕೇಜ್ ಹೆಸರಲ್ಲಿ ಮತ್ತೊಮ್ಮೆ ವಂಚಿಸಿದ “ರಾಯಲ್ ಹಾಲಿಡೇಸ್”

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಯಲ್ ಹಾಲಿಡೇಸ್ ಮತ್ತೆ ವಂಚನೆ ಮಾಡಿ ಸಿಕ್ಕಿಬಿದ್ದಿದೆ. ಈ ಹಿಂದೆ ಎರಡು ಬಾರಿ ಕ್ರಿಮಿನಲ್ ಕೇಸು ದಾಖಲಾಗಿದ್ದ ರಾಯಲ್ ಹಾಲಿಡೇಸ್ ಚೈನ್ ಲಿಂಕ್ ವಹಿವಾಟಿನ ಅಕ್ರಮವನ್ನು ಈ ಬಾರಿ ಸಿಸಿಬಿ ಪೊಲೀಸರು ಬಯಲಿಗೆ ಎಳೆದಿದ್ದಾರೆ.

Ad Widget . Ad Widget . Ad Widget .

ಚಂದ್ರಾ ಬಡಾವಣೆಯಲ್ಲಿ ದೊಡ್ಡ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಯಲ್ ಹಾಲಿಡೇಸ್ ಟೂರ್ ಪ್ಯಾಕೇಜ್ ಹೆಸರಿನಲ್ಲಿ ಲಕ್ಷಾಂತರ ಜನರಿಂದ ಹಣ ಪಡೆದು ಮೋಸ ಮಾಡಿತ್ತು. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಜೈನ್ ಲಿಂಕ್ ಜಾಲ ವಿಸ್ತರಿಸಿತ್ತು. ಚೈನ್ ಲಿಂಕ್ ವಹಿವಾಟಿನ ಹಿನ್ನೆಲೆಯಲ್ಲಿ ರಾಯಲ್ ಹಾಲಿಡೇಸ್ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿದ್ದರು. ಆ ಬಳಿಕ ಕಂಪನಿ ಸ್ಥಗಿತಗೊಂಡಿತ್ತು.

ಅದಾದ ಬಳಿಕವು ರಾಯಲ್ ಹಾಲಿಡೇಸ್ ಹುಟ್ಟು ಹಾಕಿದ್ದ ಪ್ರಶಾಂತ್, ಮುದ್ದಯ್ಯನಪಾಳ್ಯದ ಕೆ.ಎಲ್.ಇ. ಕಾಲೇಜು ಸಮೀಪ ಮತ್ತೊಂದು ರಾಯಲ್ ಹಾಲಿಡೇಸ್ ಕಚೇರಿ ಸ್ಥಾಪನೆ ಮಾಡಿ ಅಲ್ಲೂ ಸಹ ಚೈನ್ ಲಿಂಕ್ ವಹಿವಾಟು ನಡೆಸುತ್ತಿದ್ದ. ಪ್ರಶಾಂತ್ ಪಾಲುದಾರ ವಿಶ್ವನಾಥ್ ಹೈವಿಂಗ್ಸ್ ಎಂಬ ಕಂಪನಿ ಕಟ್ಟಿಕೊಂಡು ಅವನ್ನು ಮಾರಾಟ ಮಾಡುವ ಹೆಸರಿನಲ್ಲಿ ಚೈನ್ ಲಿಂಕ್ ವಹಿವಾಟನ್ನು ಮುಂದುವರೆಸಿದ್ದಾರೆ.

ಟೂರ್ ಪ್ಯಾಕೇಜ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಅವರಿಂದಲೇ ಕಮೀಷನ್ ಆಧಾರದ ಮೇಲೆ ಗ್ರಾಹಕರನ್ನು ಎಳೆಯುತ್ತಿದ್ದ ರಾಯಲ್ ಹಾಲೀಡೇಸ್ ಸಂಸ್ಥಾಪಕ ಪ್ರಶಾಂತ್ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಪ್ರಶಾಂತ್ ಸೇರಿ ಹಲವರ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಈ ಬಾರಿ ರಾಯಲ್ ಡ್ರೀಮ್ಸ್ ಟು ಪ್ಲೇ ಪ್ರೈವೆಟ್ ಲಿ. ಕಂಪನಿ ಮೂಲಕ ವಿವಿಧ ಟೂರ್ ಪ್ಯಾಕೇಜ್ ಗಳನ್ನು ಪರಿಚಯಿಸಿದ್ದ. ತನ್ನ ತಾಯಿ ಹಾಗೂ ಸಹೋದರಿ ಹೆಸರಿನಲ್ಲಿ ಗಿರಿನಗರದಲ್ಲಿ ಕಚೇರಿ ತೆರೆದಿದ್ದು, ಅದನ್ನು ಸ್ಥಗಿತಗೊಳಿಸಿದ್ದ. ಬಳಿಕ ಸರ್‌. ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ರಾಯಲ್ ಡ್ರೀಮ್ ಟು ಪ್ಲೇ ಪ್ರೆ. ಲಿ ಕಂಪನಿಯ ಕಚೇರಿ ತೆರೆದಿದ್ದ.

Leave a Comment

Your email address will not be published. Required fields are marked *