Ad Widget .

ಕಾಶ್ಮೀರದಲ್ಲಿ ಪಾಕ್ ಉಗ್ರರಿಂದ ಶಸ್ತ್ರಾಸ್ತ್ರಗಳ ತರಬೇತಿ| ಸ್ಥಳ ತನಿಖೆಗೆ ತೆರಳಲು ಮುಂದಾದ ಅಮಿತ್ ಶಾ|

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನವದೆಹಲಿ: ಕಾಶ್ಮೀರದಲ್ಲಿ ಪಾಕ್ ಉಗ್ರರು ಶಸ್ತ್ರಾಸ್ತ್ರಗಳ ಬಳಸುವ ಬಗ್ಗೆ ತರಬೇತಿ ಕೊಡುತ್ತಿರುವ ಬಗ್ಗೆ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಈ ಕುರಿತು ವೀಡಿಯೋವನ್ನು ಬಿಡುಗಡೆ ಮಾಡಿರುವ ವಾಹಿನಿ ಈ ಸಾಕ್ಷ್ಯವನ್ನು ಪಾಕ್ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ತೆರಳಲು ಮುಂದಾಗಿದ್ದಾರೆ.

Ad Widget . Ad Widget . Ad Widget .

ವೀಡಿಯೋದಲ್ಲಿ ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ಮೂಲದ ಉಗ್ರರು ತರಬೇತಿ ನೀಡುತ್ತಿರುವ ಅಂಶ ಒಳಗೊಂಡಿದೆ. ಕಾಶ್ಮೀರದಲ್ಲಿ ಇತ್ತಿಚೆಗೆ ಬಂಧಿಸಲಾಗಿದ್ದ ಉಗ್ರನಿಂದ ವಶ ಪಡೆಸಿಕೊಂಡಿದ್ದ ಮೊಬೈಲ್‌ನಿಂದ ಈ ವೀಡಿಯೋ ಪಡೆಯಲಾಗಿದೆ ಎಂದು ವಾಹಿನಿ ಹೇಳಿದೆ.

ವಿಚಾರಣೆ ವೇಳೆ ಉಗ್ರನಿಂದ ಪೊಲೀಸರು ಮೊಬೈಲ್ ವಶಪಡಿಸಿಕೊಂಡಿದ್ದು ಆ ಮೊಬೈಲ್‌ನಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೇಗೆ ಲೋಡ್ ಮಾಡುವುದು, ಅದನ್ನು ಬಳಕೆ ಮಾಡುವುದು ಹೇಗೆ ಎಂದು ವೀಡಿಯೋ ಕಾಲ್ ಮೂಲಕ ತರಬೇತಿ ನೀಡಲಾಗುತ್ತಿತ್ತು ಎನ್ನಲಾಗಿದೆ. ಹೀಗೆ ತರಬೇತು ನೀಡುತ್ತಿರುವ ವ್ಯಕ್ತಿ ಜೈಶ್-ಎ-ಮೊಹಮ್ಮದ್ ಎಂಬ ಭಯೋತ್ಪಾದಕ ಸಂಘಟನೆಯವನು ಎಂದು ಹೇಳಲಾಗಿದೆ.
ಉಗ್ರರ ದಾಳಿ ಹೆಚ್ಚಾಗುತ್ತಿರುವ ಬೆನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ತೆರಳಲು ಮುಂದಾಗಿದ್ದಾರೆ. ಅಕ್ಟೋಬರ್ 23-25ರವರೆಗೂ ಅವರು ಕಾಶ್ಮೀರದಲ್ಲಿ ಇರಲಿದ್ದು, ಭದ್ರತಾ ವ್ಯವಸ್ಥೆಗಳ ಬಗ್ಗೆ ಸಭೆಗಳನ್ನು ನಡೆಸಲಿದ್ದಾರೆ. ಅಮಿತ್ ಶಾ ಭೇಟಿ ಹಿನ್ನಲೆ ಈಗಾಗಲೇ ಭದ್ರತೆಯನ್ನು ಹೆಚ್ಚು ಮಾಡಲಾಗುತ್ತಿದ್ದು, ಜಮ್ಮು ಕಾಶ್ಮೀರ ಪ್ರಮುಖ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಕೋಬಿಂಗ್ ನಡೆಸಲಾಗುತ್ತಿದೆ. ಕಳೆದ ವಾರ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ಒಂಬತ್ತು ಸೇನಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು.

Leave a Comment

Your email address will not be published. Required fields are marked *