Ad Widget .

ಅ.21ರಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಂಗಳೂರು: ರಾಜ್ಯದಲ್ಲಿ 6 ರಿಂದ 12ನೇ ತರಗತಿಗಳನ್ನು ಆರಂಭಿಸಲಾಗಿದ್ದು, ಇದೀಗ ಸ್ಥಗಿತಗೊಂಡಿದ್ದ ಬಿಸಿಯೂಟ ಕಾರ್ಯಕ್ರಮವನ್ನು ಅ. 21ರಿಂದ ಪುನರಾರಂಭಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Ad Widget . Ad Widget . Ad Widget .

ಈ ಕುರಿತಂತೆ ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಅಧಿಕೃತ ಜ್ಞಾಪನೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2021ರ ಅಕ್ಟೋಬರ್ 21ರಿಂದ ಮಧ್ಯಾಹ್ನ ಉಪಹಾರ ಯೋಜನೆಯನ್ನು ಪುನರಾರಂಭಿಸಲು ರಾಜ್ಯ ಕಚೇರಿಯಿಂದ ಸೂಚನೆ ನೀಡಿರುತ್ತಾರೆ. ಈ ಸಂಬಂಧ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮವನ್ನು ಆರಂಭಿಸಲು ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸರ್ಕಾರಿ, ಅನುದಾನಿತ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಈ ಕೆಳಕಂಡ ಸೂಚನೆ ನೀಡುವಂತೆ ತಿಳಿಸಿದೆ.

ಶಾಲೆಗಳಲ್ಲಿ ಅಡುಗೆಯನ್ನು ತಯಾರು ಮಾಡುವ ಆಹಾರ ಧಾನ್ಯಗಳ ದಾಸ್ತಾನುಗಳ್ನು ಪರಿಶೀಲಿಸಿಕೊಳ್ಳುವುದು. ಯಾವುದೇ ಅವಧಿ ಮೀರಿರುವ ಆಹಾರ ಧಾನ್ಯಗಳನ್ನು ಬಳಕೆ ಮಾಡದಂತೆ ಹಾಗೂ ಪರಿಶೀಲಿಸಿಕೊಳ್ಳುವುದು. ಶಾಲೆಗಳಲ್ಲಿ ಗ್ಯಾಸ್ ಸ್ಟೌವ್ ಮತ್ತು ಪಾತ್ರೆ ಪರಿಕರಗಳನ್ನು ದುರಸ್ತಿ ಹೊಂದಿದ್ದಲ್ಲಿ, ನಿಯಮಾನುಸಾರ ಅಕ್ಷರ ದಾಸೋಹ ಕಾರ್ಯಕ್ರಮದ ಅನುದಾವನ್ನು (ರೂ.5 ಸಾವಿರದಿಂದ 8 ಸಾವಿರದ ಒಳಗೆ) ಬಳಕೆ ಮಾಡಿಕೊಂಡು ರಿಪೇರಿ ಮಾಡಿಸುವಂತೆ ತಿಳಿಸುವುದು. ಶಾಲೆಯ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸುವುದು. ಆಹಾರ ದಾಸ್ತಾನು ಕೊಠಡಿಯನ್ನ ಡೀಪ್ ಕ್ಲಿನಿಂಗ್ ಮಾಡುವುದು. ಶಾಲೆಯಲ್ಲಿರುವ ಶೌಚಾಲಯಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಅಗತ್ಯ ಕ್ರಮ ವಹಿಸುವುದು. ಅಡುಗೆ ಸಿಬ್ಬಂದಿ ವೈಯುಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಆದೇಶಿಸಿದೆ.

ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್-19 ಸಾಂಕ್ರಾಮಿಕ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ‘ಎರಡು ಡೋಸ್’ ಲಸಿಕೆಯನ್ನು ತಪ್ಪದೇ ಹಾಕಿಸಿಕೊಂಡಿರಬೇಕು. ಶಾಲಾ ವಿದ್ಯಾರ್ಥಿಗಳು ಕೈತೊಳೆಯಲು ನೀರಿನ ವ್ಯವಸ್ಥೆಯೊಂದಿಗೆ ಹ್ಯಾಂಡ್ ವಾಷಿಂಗ್ ಯುನಿಟ್‍ಗಳನ್ನು ರಿಪೇರಿ ಮಾಡಿಸಿ ಸ್ವಚ್ಛವಾಗಿಟ್ಟು ಪ್ರತಿನಿತ್ಯ ಕೈತೊಳೆಯಲು ಉಪಯೋಗಿಸುವುದು. ಕಾಲಕಾಲಕ್ಕೆ ಕೋವಿಡ್-19ರ ಪರೀಕ್ಷೆಯನ್ನು ಮಾಡಿಸಿಕೊಂಡಿರುವುದನ್ನು ಮುಖ್ಯ ಶಿಕ್ಷಕರು ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

2021ರ ಅಕ್ಟೋಬರ್ 21ರೊಳಗೆ ಶಾಲೆಗಳಿಗೆ ಅಕ್ಕಿ ಮತ್ತು ಗೋಧಿಯು ಸರಬರಾಜಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರವನ್ನು ನೀಡಲು ಉಳಿದ ಆಹಾರ ಪದಾರ್ಥಗಳನ್ನು 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ರೂ.4.97ರಂತೆ ಹಾಗೂ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ರೂ.7.45ರ ಪರಿವರ್ತನಾ ವೆಚ್ಚವನ್ನು ಒಳಸಿಕೊಂಡು ಅಡುಗೆ ತಯಾರಿಸುವಂತೆ ಸೂಚನೆ ನೀಡಿದೆ. ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಹಾಗೂ ಸಹಾಯಕ ಅಡುಗೆಯವರು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆಯನ್ನು 2021ರ ಅಕ್ಟೋಬರ್ 21ರೊಳಗೆ ಪಡೆದುಕೊಂಡು ಅಡುಗೆ ಕೇಂದ್ರಗಳಿಗೆ ಹಾಜರಾಗಲು ಸೂಚನೆ ನೀಡುವುದು.

ಈ ಎಲ್ಲಾ ಅಂಶಗಳನ್ನೊಳಗೊಂಡಂತೆ 2021ರ ಅಕ್ಟೋಬರ್ 21ರಿಂದ ಮಧ್ಯಾಹ್ನದ ಉಪಹಾರವನ್ನು ವಿದ್ಯಾರ್ಥಿಗಳಿಗೆ ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು, ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *